ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣ ಇಂದು ಎಲ್ಲೆಡೆ ತನ್ನ ಭುಜಬಲವನ್ನು ವಿಸ್ತರಿಸಿಕೊಂಡಿದೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಕೆಲವೊಂದು ವಿಚಾರಗಳು ತೀವ್ರ ಕುತೂಹಲ ಕೆರಳಿಸಿ, ಭಾರೀ ವೈರಲ್ ಆಗುತ್ತವೆ. ಸದ್ಯ ಉತ್ತರಪ್ರದೇಶದಲ್ಲಿ ವಿಡಿಯೋವೊಂದು ಸಖತ್ ಹಲ್-ಚಲ್ ಸೃಷ್ಟಿಸಿದ್ದು, ನೆಟ್ಟಿಗರಿಂದ ಕೂಡ ವ್ಯಾಪಕದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಇಬ್ಬರು ಸಹೋದರರು ಹಳೆಯ ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತನೆ ಮಾಡಿದ್ದರು. ಆ ಕಾರಿಗೆ ಹೊಸದಾಗಿ ಬಣ್ಣವನ್ನು ಬಳಿಸಲು ತೆಗೆದುಕೊಂಡು ಹೋಗುವಾಗ ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿದೆ. ಹೆಲಿಕಾಪ್ಟರ್ ರೀತಿಯಲ್ಲಿ ಬದಲಾಯಿಸಲಾದ ವ್ಯಾಗನ್ಆರ್ ಕಾರನ್ನು ಪೇಂಟ್ಗಾಗಿ ಸಹೋದರರಿಬ್ಬರು ಅಕ್ಬರ್ಪುರಕ್ಕೆ ಕೊಂಡೊಯ್ಯುತ್ತಿದ್ದರು.
ಆ ವೇಳೆ, ಕೊಟ್ವಾಲಿ ಎಂಬಲ್ಲಿ ಇತರೆ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರು, ಮಾರ್ಪಾಡುಗೊಳಿಸಿದ ಕಾರನ್ನು ಮೋಟಾರು ವಾಹನ ನಿಯಮಗಳ ಉಲ್ಲಂಘನೆಯಡಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಸಹೋದರರಿಬ್ಬರು ಮದುವೆ ಸಮಾರಂಭಗಳಿಗೆ ಈ ಕಾರನ್ನು ಬಾಡಿಗೆ ನೀಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಈ ಕಾರಿನ ವಿಡಿಯೋವನ್ನು ಮಾರ್ಚ್ 17ರಂದು ಪತ್ರಕರ್ತೆ ಪ್ರಿಯಾ ಸಿಂಗ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅಂದಿನಿಂದ ಇಲ್ಲೆವಯವರೆಗೆ 71 ಸಾವಿರಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿದ್ದು, ಹಲವಾರು ಲೈಕ್ ಹಾಗೂ ರೀಟ್ವೀಟ್ ಮಾಡಿದ್ದಾರೆ. ಜೊತೆಗೆ ತರಹೇವಾರಿ ಕಾಮೆಂಟ್ ಸಹ ಮಾಡಿದ್ದಾರೆ. ನೆಟ್ಟಿಗರೊಬ್ಬರು, ‘ಇದು ಭಾರತದಲ್ಲಿ ಮಾತ್ರ ನಡೆಯುತ್ತದೆ’ ಎಂದು ಹೇಳಿದ್ದಾರೆ.