ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಹೊಟೇಲ್ಗೆ ಹೋದಾಗ ಆಹಾರದಲ್ಲಿ ಒಂದು ಕೂದಲು ಇರೋದನ್ನು ಸಹಿಸೋದಿಲ್ಲ. ಅಂಥದ್ರಲ್ಲಿ ಒಂದು ದೋಸೆಯಲ್ಲಿ 8 ಜಿರಲೆಗಳು…ಕಾಣಿಸಿ ಕೊಂಡಿವೆ ಅನ್ನೋದನ್ನು ನೀವು ನಂಬ್ತಿರಾ .. ಅಬ್ಬಾ! ನೀವು ನಂಬಲೇ ಬೇಕು.ಇದನ್ನು ಮಹಿಳೆಯೊಬ್ಬರು ವಿಡಿಯೋ ಸಮೇತ ಶೂಟಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೆಹಲಿಯ ಮದ್ರಾಸ್ ಕಾಫಿ ಹೌಸ್ನ ಈ ವಿಡಿಯೋವನ್ನು ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ. ಅಷ್ಟೇ ಅಲ್ಲ, ದುಬಾರಿ ಹೋಟೆಲ್ಗಳಿಗಿಂತಲೂ ಉಳಿದ ಸಣ್ಣ ಪುಟ್ಟ ಹೊಟೇಲ್ಗಳೇ ವಾಸಿ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ದೇಶದ ರಾಜಧಾನಿ ದೆಹಲಿಯಿಂದ ಈ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ಕನ್ನಾಟ್ ಪ್ಲೇಸ್ನಲ್ಲಿರುವ ಪ್ರಸಿದ್ಧ ಮದ್ರಾಸ್ ಕಾಫಿ ಹೌಸ್ನಲ್ಲಿನ ದೋಸೆಯಲ್ಲಿ 8 ಜಿರಲೆಗಳು ಪತ್ತೆಯಾಗಿವೆ. ಅದರ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋವನ್ನು ಇಶಾನಿ ಎಂಬ ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಮಾರ್ಚ್ 7 ರಂದು ಈ ಘಟನೆ ಸಂಭವಿಸಿದೆ ಎಂದು ಇಶಾನಿ ಹೇಳಿದ್ದಾರೆ. “ನಾನು ಮಧ್ಯಾಹ್ನ 1 ಗಂಟೆ ಸುಮಾರಿಗೆ ನನ್ನ ಸ್ನೇಹಿತನೊಂದಿಗೆ ಕನ್ನಾಟ್ ಪ್ಲೇಸ್ನಲ್ಲಿರುವ ಮದ್ರಾಸ್ ಕಾಫಿ ಹೌಸ್ಗೆ ಹೋದೆ. ಅಲ್ಲಿ ನಾವು ಎರಡು ದೋಸೆಗಳನ್ನು ಆರ್ಡರ್ ಮಾಡಿದೆವು, ಆದರೆ ನಾನು ದೋಸೆಗಳನ್ನು ತಿಂದಾಗ, ಅವು ವಿಚಿತ್ರವಾದ ರುಚಿಯನ್ನು ಹೊಂದಿದ್ದವು. ಸರಿಯಾಗಿ ನೋಡಿದಾಗ ಅದರಲ್ಲಿ ಜಿರಳೆ ಕಂಡು ಬಂತು. ದೋಸೆಯಲ್ಲಿ ಒಟ್ಟು ಎಂಟು ಜಿರಳೆಗಳನ್ನು ಕಂಡೆ. ಇದರಿಂದ ನನ್ನ ಹೃದಯದಲ್ಲಿ ಕಸಿವಿಸಿಯಾಯಿತು” ಎಂದು ಪೋಸ್ಟ್ ಜೊತೆಗೆ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ಕನ್ನಾಟ್ ಪ್ಲೇಸ್ನಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಇಶಾನಿ ಹೇಳಿದ್ದಾರೆ. “ಇಲ್ಲಿ ಎಲ್ಲಾ ವಿವರಗಳನ್ನು ಸಾಕ್ಷಿ ಸಮೇತ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗೆ ಅಧಿಕಾರಿಗಳ ಮೇಲೆ ಸಿಟ್ಟು, ನಿರಾಸೆ ಇದೆ. ಏನಾದರೂ ಕ್ರಮ ಕೈಗೊಳ್ಳುವವರೆಗೂ ನಾನು ಸುಮ್ಮನಿರುವುದಿಲ್ಲ” ಎಂದರು.
“ಪ್ರತಿ ಗಂಟೆಗೆ 30 ಗ್ರಾಹಕರು ಬರುವ ಇಂತಹ ಪ್ರತಿಷ್ಠಿತ ರೆಸ್ಟೊರೆಂಟ್ ಹೇಗೆ ನಿರ್ಲಕ್ಷ್ಯ ವಹಿಸುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಡುಗೆ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಅದರ ಅರ್ಧಭಾಗದಲ್ಲಿ ಛಾವಣಿ ಇರಲಿಲ್ಲ ” ಎಂದು ಇಶಾನಿ ಹೇಳಿದ್ದಾರೆ.“ನಾನು ವಿಡಿಯೋ ಮಾಡುವುದನ್ನು ನಿಲ್ಲಿಸಲು ನನಗೆ ಪರಿಹಾರ ನೀಡುವುದಾಗಿ ರೆಸ್ಟೋರೆಂಟ್ ಮಾಲೀಕರು ನನಗೆ ಹೇಳುತ್ತಲೇ ಇದ್ದರು. ಅಂತಿಮವಾಗಿ ನಾನು ಅವರಿಗೆ ಸರಿದೂಗಿಸಲು ಒಂದು ಮಾರ್ಗವಿದೆ. ಸಸ್ಯಾಹಾರಿ ಆಗಿದ್ದರೆ ನನ್ನ ಮುಂದೆ ಕುಳಿತು ಈ 8 ಜಿರಳೆಗಳನ್ನು ತಿನ್ನಬಹುದು. ಆಗ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದೆ” ಎಂದು ಇಶಾನಿ ಬರೆದುಕೊಂಡಿದ್ದಾರೆ.
ಇಶಾನಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡ ನಂತರ ಅದು ವೈರಲ್ ಆಗಲು ಪ್ರಾರಂಭಿಸಿತು. ಈ ಬಗ್ಗೆ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ರೆಸ್ಟೋರೆಂಟ್ನ ಪರವಾನಗಿಯನ್ನು ಪರಿಶೀಲಿಸಲು ಕೇಳಿದರೆ, ಇತರರು ಪೊಲೀಸ್ ಠಾಣೆಗೆ ಹೋಗಲು ಸಲಹೆ ನೀಡಿದರು.