ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಮನುಷ್ಯ ನಾನಾ ವಿಧದ ಕಾಯಿಲೆಯಿಂದ ಬಳಲುತ್ತಿರೋದೇ ಹೆಚ್ಚು. ವಿಚಿತ್ರ ವಿಚಿತ್ರ ಕಾಯಿಲೆಗಳು ಆತನನ್ನು ವಕ್ಕರಿಸುತ್ತಿದ್ದು, ವೈದ್ಯಲೋಕಕ್ಕೂ ಕೂಡ ಇದೊಂದು ಸವಾಲಾಗಿ ಪರಿಣಮಿಸಿದೆ. ಇದೀಗ ವಿಚಿತ್ರವೆಂಬಂತಹ ಅಪರೂಪದ ಕಾಯಿಲೆಯೆಂದು ಹೇಳಲಾದ ಯೂಟರ್ಸ್ ಡಿಡೆಲ್ಸಿಸ್ ನಿಂದ ಹೆಣ್ಣೊಬ್ಬಳು ಬಳಲುತ್ತಿದ್ದಾಳೆ.
ಹೌದು, ಇದೊಂದು ಅಪರೂಪದ ಜನನಾಂಗದ ಸ್ಥಿತಿಯಾಗಿದ್ದು, ಇದರಲ್ಲಿ ಬಳಲುತ್ತಿರುವವರು ಎರಡು ಯೋನಿ ಹಾಗೂ ಎರಡು ಗರ್ಭಾಶಯಗಳನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ. 25ರ ಹರೆಯದ ಆನಿ ಚಾರ್ಲೊಟ್ ಎಂಬ ಯುವತಿಗೆ ಯೂಟರಸ್ ಡಿಡೆಲ್ಸಿಸ್ ಎಂಬ ಅಪರೂಪದ ಸ್ಥಿತಿಯನ್ನು ಹೊಂದಿರುವುದು ಪತ್ತೆಯಾಗಿದ್ದು, ಈ ಮಹಿಳೆಗೆ ಎರಡು ಯೋನಿ, ಎರಡು ಗರ್ಭಾಶಯವಿದೆಯಂತೆ. ವೈದ್ಯಕೀಯ ತಜ್ಞರು ಹೇಳುವ ಪ್ರಕಾರ ಈ ಯುವತಿಯೂ ಇಬ್ಬರೂ ಪುರುಷರಿಂದ ಎರಡು ಮಕ್ಕಳನ್ನು ಪಡೆಯಬಹುದು. ಸಂತಾನೋತ್ಪತ್ತಿ ವ್ಯವಸ್ಥೆಯು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಗರ್ಭಾಶಯದ ಡಿಡೆಲ್ಫಿಸ್ ಎಂದರೆ ಮಹಿಳೆಯು ಎರಡು ಗರ್ಭಾಶಯ ಮತ್ತು ಎರಡು ಯೋನಿಗಳೊಂದಿಗೆ ಜನಿಸುವ ಸ್ಥಿತಿಯಾಗಿದೆ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದ್ದು, ಕೆಲವೊಮ್ಮೆ ಎರಡೂ ಗರ್ಭಾಶಯಗಳಿಗೆ ಒಂದೇ ಗರ್ಭಕಂಠವಿರುತ್ತದೆ. ಕೆಲವೊಮ್ಮೆ ಪ್ರತಿ ಗರ್ಭಾಶಯವು ಗರ್ಭಕಂಠವನ್ನು ಹೊಂದಿರುತ್ತದೆ. ಈ ಸಮಸ್ಯೆಯಿರುವ ಮಹಿಳೆಯರಲ್ಲಿ ಯೋನಿಯನ್ನು ತೆಳುವಾದ ಪೊರೆಯಿಂದ ಎರಡು ಪ್ರತ್ಯೇಕ ತೆರೆಯುವಿಕೆಗಳಾಗಿ ವಿಂಗಡಿಸಲಾಗಿದೆ. ಇಂತಹ ಪ್ರಕರಣಗಳು ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯು ಕೇವಲ ಆರರಿಂದ ಇಪ್ಪತ್ತೆರಡು ವಾರಗಳಲ್ಲಿದ್ದಾಗ ಈ ಅಂಗಗಳು ಅಭಿವೃದ್ಧಿಗೊಳ್ಳುತ್ತವೆ.
* ಟ್ಯಾಂಪೂನ್ ಬಳಸುವಾಗ ರಕ್ತ ಸೋರಿಕೆಯಾಗುವುದು
* ನೋವಿನಿಂದ ಕೂಡಿದ ಲೈಂಗಿಕತೆ
* ಮುಟ್ಟಿನ ಸಮಯದಲ್ಲಿ ಅಥವಾ ಅವಧಿಗೂ ಮೊದಲು ಬಾರಿ ಸೆಳೆತ
* ಮುಟ್ಟಿನ ಸಮಯದಲ್ಲಿ ಅಸಹಜತೆಯಿಂದ ಕೂಡಿದ ರಕ್ತಸ್ರಾವ
* ಅವಧಿಪೂರ್ವ ಜನನದ ಅಪಾಯವು ಹೆಚ್ಚಳ
* ಗರ್ಭಪಾತದ ಅಪಾಯ ಹೆಚ್ಚು
* ನೋವಿನ ಕೂಡಿದ ಸಂಭೋಗ
* ಗರ್ಭಪಾತವಾಗುವುದು.
ಗರ್ಭಾಶಯದ ಡಿಡೆಲ್ಸಿಸ್ ಹೊಂದಿರುವ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ವಿಪರೀತ ನೋವಿನ ಅನುಭವ ಮತ್ತು ಭಾರೀ ರಕ್ತಸ್ರಾವವಾಗುತ್ತದೆ. ಎರಡು ಯೋನಿಯಿರುವ ಕಾರಣ ಕೆಲವು ಮಹಿಳೆಯರು ಹೆಚ್ಚು ರಕ್ತಸ್ರಾವವಾಗುತ್ತಿದೆ ಎಂದು ಭಾವಿಸಬಹುದು.