ನ್ಯೂಸ್ ನಾಟೌಟ್: ನಿಮ್ಮ ಮಕ್ಕಳು ಪದೇಪದೇ ಅನಾರೋಗ್ಯದಿಂದ ಬಳಲುತ್ತಿದ್ದಾರಾ? ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳಿಂದ ಶಾಲೆಗೆ ಗೈರಾಗುತ್ತಿದ್ದಾರಾ? ಹಾಗಿದ್ದರೆ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಸುವರ್ಣ ಬಿಂದು ಪ್ರಾಶನವನ್ನು ನೀವು ನೀಡಬಹುದು.
ಈ ಹಿನ್ನಲೆಯಲ್ಲಿ ಮಾ.20 ರಂದು ಕೆ.ವಿ.ಜಿ ಆಯುರ್ವೇದ ಆಸ್ಪತ್ರೆಯಲ್ಲಿ “ಸ್ವರ್ಣ ಬಿಂದು ಪ್ರಾಶನ” ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನು ಪಡೀಬಹುದು. ಇದು ಪುಷ್ಯ ನಕ್ಷತ್ರದ ದಿನದಂದು ಮಕ್ಕಳಿಗೆ ನೀಡುವ ಸುವರ್ಣ ಭಸ್ಮ ಮತ್ತು ಕೆಲವು ಔಷಧಿಗಳ ಮಿಶ್ರಣವಾಗಿದ್ದು, ಮಕ್ಕಳ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯನ್ನು ಕಾಣಬಹುದು. ಆಯುರ್ವೇದ ಶಾಸ್ತ್ರದಲ್ಲಿ ಅನುಷ್ಠಾನದಲ್ಲಿರುವ ಸ್ವರ್ಣ ಬಿಂದು ಪ್ರಾಶನವು ಪುಷ್ಯ ನಕ್ಷತ್ರದ ಮಂಗಳಕರ ದಿನದಂದು ಮಕ್ಕಳಿಗೆ ನೀಡುವ ಪ್ರಾಚೀನ ವಿಧಾನವಾಗಿದೆ. ಪುಷ್ಯ ನಕ್ಷತ್ರದ ದಿನವು ಪ್ರತಿ 27 ದಿನಗಳಿಗೊಮ್ಮೆ ಬರುತ್ತದೆ.
ಆಯುರ್ವೇದ ಶಾಸ್ತ್ರದಲ್ಲಿ ಅನುಷ್ಠಾನದಲ್ಲಿರುವ ಔಷಧ ಪದ್ಧತಿ ಇದಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಏಕಾಗ್ರತೆ, ಗ್ರಹಣ ಶಕ್ತಿ ಮತ್ತು ಬುದ್ಧಿ ಶಕ್ತಿಯನ್ನು ವೃದ್ಧಿಸುವಂತೆ ಮಾಡುತ್ತದೆ. ಜೀರ್ಣಶಕ್ತಿ ವರ್ಧನೆ ಮತ್ತು ಮಕ್ಕಳ ಗೃಹ ಬಾಧೆಯನ್ನು ನಿವಾರಿಸುತ್ತದೆ.ಮಕ್ಕಳಲ್ಲಿ ದೀರ್ಘಾಯುಷ್ಯ ಮತ್ತು ಬಲವರ್ದನೆಗೆ ಸಹಕಾರಿ ಹಾಗೂ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ದೀರ್ಘಕಾಲ ರಕ್ಷಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7353756066, 9901140833, 7019199559, 7618753229