ನ್ಯೂಸ್ ನಾಟೌಟ್:ಕೆಲವರಿಗೆ ಎಟಿಎಂ ಹೋಗೋ ಹೊತ್ತಿಗೆ ಪಕ್ಕದಲ್ಲೇ ಇರುವ ವ್ಯಕ್ತಿಗಳ ಜತೆ ಸಹಾಯ ಕೇಳುವ ಕ್ರಮವಿದೆ.ಕೆಲವೊಮ್ಮೆ ನಮ್ಮೊಳಗಿರುವ ವ್ಯಕ್ತಿಗಳೇ ನಮಗೆ ವಂಚನೆ ಮಾಡುತ್ತಾರೆಂದರೆ ಇನ್ನು ಗೊತ್ತು ಗುರಿಯಿಲ್ಲದ ವ್ಯಕ್ತಿಗಳನ್ನು ಹೇಗೆ ನಂಬೋದಕ್ಕೆ ಸಾಧ್ಯವಿದೆ ಹೇಳಿ..ಹೌದು,ಹೀಗೆ ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡಿದ ವ್ಯಕ್ತಿಯೊಬ್ಬ ಬಳಿಕ ಅವರ ಖಾತೆಯಿಂದ 1 ಲಕ್ಷಕ್ಕೂ ಅಧಿಕ ಹಣ ತೆಗೆದು ವಂಚಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಎಟಿಎಂ ಬಳಕೆ ಗೊತ್ತಿಲ್ಲದ ಮೇಲಂತಬೆಟ್ಟು ಗ್ರಾಮದ ಶರೀಫ್ (53) ಅವರು ಜ. 11ರಂದು ಎಟಿಎಂನಿಂದ ಹಣ ಪಡೆಯಲು ಅಪರಿಚಿತ ವ್ಯಕ್ತಿಯೊಬ್ಬನ ಸಹಾಯ ಬಯಸಿ ಕಾರ್ಡ್, ಪಿನ್ ನಂಬರ್ ಇತ್ಯಾದಿ ವಿವರಗಳನ್ನು ಆತನಿಗೆ ನೀಡಿದ್ದಾರೆ.ದರೆ ಆತ ಇದನ್ನೇ ಲಾಭವನ್ನಾಗಿ ಪಡ್ಕೊಂಡು ವಂಚನೆ ಮಾಡೋದಕ್ಕೆ ಶುರು ಮಾಡಿದ್ದಾನೆ. ಆತ ಅವರು ಹೇಳಿದಷ್ಟು (3 ಸಾವಿರ ರೂ.) ಹಣ ತೆಗೆದುಕೊಟ್ಟ ಬಳಿಕ ಬೇರೆ ಯಾವುದೋ ಕಾರ್ಡನ್ನು ಮರಳಿಸಿದ್ದ.ಆ ವಿಷಯ ಅರಿಯದ ಅವರು ಹಣ, ಕಾರ್ಡ್ ಪಡೆದು ಮರಳಿದ್ದರು.

ಮೂರು ದಿನಗಳ ಬಳಿಕ ಅವರ ಖಾತೆಯಿಂದ 1,05,300 ರೂ. ಕಡಿತವಾಯಿತು. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಲು ತೆರಳಿದಾಗ ಎಟಿಎಂನಲ್ಲಿ ನೆರವು ನೀಡಿದ ವ್ಯಕ್ತಿ ಬೇರೊಂದು ಎಟಿಎಂ ಕಾರ್ಡನ್ನು ನೀಡಿರುವುದು ಅರಿವಿಗೆ ಬಂತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.