ನ್ಯೂಸ್ ನಾಟೌಟ್: ಲೋಕಸಭೆ ಚುನಾವಣಾ ಸಮೀಪಿಸುತ್ತಿದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕೆರಿಗೆ ನಾವು ಮತದಾನದ ಯಾಕೆ ಮಾಡಬೇಕು ಎಂಬುವುದರ ಕುರಿತಾಗಿ ಇನ್ನೂ ಸರಿಯಾದ ತಿಳಿವಳಿಕೆ ಇಲ್ಲದಿರುವುದನ್ನು ಮನಗಂಡು ವಿಶೇಷ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೆಹರೂ ಮೆಮೋರಿಯಲ್ ಕಾಲೇಜು ಮತ್ತು ಜಿಲ್ಲಾ ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ಆಯೋಜಿಸಲಾದ ಮತದಾನ ಜಾಗೃತಿ ಕುರಿತಾದ “ಮತದಾನ ಯಾಕೆ ಬೇಕು?” ಎಂಬ ಬೀದಿನಾಟಕವನ್ನು ಸುಳ್ಯದ ಕುರುಂಜಿಭಾಗ್ ನಲ್ಲಿರುವ ಕೆವಿಜಿ ವೃತ್ತದಲ್ಲಿ ಮಾರ್ಚ್ 15ರಂದು ಪ್ರದರ್ಶಿಸಲಾಯಿತು.
ಬೀದಿನಾಟಕವನ್ನು ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕರಾದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಮಮತಾ ಕೆ ನಿರ್ದೇಶಿಸಿದ್ದಾರೆ. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಭವ್ಯ ಪಿ.ಎಂ. ಮತ್ತು ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಎ.ಎನ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ., ಶೈಕ್ಷಣಿಕ ಸಲಹೆಗಾರ ಪ್ರೊ.ಬಾಲಚಂದ್ರ ಎ.ಎಂ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ.ಡಿ, ವರ್ತಕ ಸಂಘದ ಅಧ್ಯಕ್ಷ ಸುದಾಕರ ರೈ, ಸುಳ್ಯದ ಬೂತ್ ಮಟ್ಟದ ಚುನಾವಣಾಧಿಕಾರಿ ಶಿವಪ್ರಸಾದ್, ಕಮಲಾಕ್ಷ, ವರ್ಷಿತಾ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಸ್ವೀಪ್ ತರಬೇತುದಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಿವಾನಂದ ಜಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್ನೆಂಸಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪಿ.ಪಿ. ನಿರೂಪಿಸಿ, ವಂದಿಸಿದರು.ಕಾರ್ಯಕ್ರಮದ ಮುಖ್ಯ ಆಕರ್ಷಣೆ ಬೀದಿ ನಾಟಕದ ಕಲಾವಿದರ ತಂಡದಲ್ಲಿ ಅಂತಿಮ ಬಿ.ಕಾಂ.ನ ರತ್ನಸಿಂಚನ, ರಕ್ಷಾ, ಅಂತಿಮ ಬಿ.ಎ. ವಿಭಾಗದ ಹರ್ಷಿತಾ, ಅಂತಿಮ ಸಮಾಜಕಾರ್ಯ ವಿಭಾಗದ ಸುಶ್ಮಿತಾ, ರೋಹಿತ್, ಯಶಸ್ವಿ, ದ್ವಿತೀಯ ಸಮಾಜಕಾರ್ಯದ ಅಕ್ಷಯ್, ಚಂದನ್, ಪ್ರಥಮ ಸಮಾಜ ಕಾರ್ಯದ ಪ್ರಮಿತಾ, ಸಾತ್ವಿಕ್, ಜಿತೇಶ್, ಪ್ರಥಮ ಬಿ.ಎ. ವಿಭಾಗದ ಮಂಜುನಾಥ್ ಮೊದಲಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಕಾಲೇಜಿನ ಆಡಳಿತ ಮಂಡಳಿ ಪ್ರೋತ್ಸಾಹ ನೀಡಿದ್ದು, ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಹಲವಾರು ಮಂದಿ ಸಾರ್ವಜನಿಕರು ಬೀದಿ ನಾಟಕವನ್ನು ವೀಕ್ಷಣೆ ಮಾಡಿದ್ರು.ಈ ಮೂಲಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂತು.