ನ್ಯೂಸ್ ನಾಟೌಟ್: ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ಎಡಮಂಗಲ ವತಿಯಿಂದ ಮಾ.16ರಂದು ಸಾಯಂಕಾಲ 3ಕ್ಕೆ ಸೌಜನ್ಯಳ ನ್ಯಾಯಕ್ಕಾಗಿ ಬೃಹತ್ ಜನಾಂದೋಲನ ಸಭೆ ಎಡಮಂಗಲ ಶಿವ ಪಾರ್ವತಿ ಸಭಾಭವನ ನಡೆಯಲಿದೆ.
ಸಭೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣನವರ್, ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ತುಳುನಾಡ ದೈವಾರಾಧನೆ ವಿಮರ್ಷಕ ತಮ್ಮಣ್ಣ ಶೆಟ್ಟಿ , ಹೈಕೋರ್ಟ್ ವಕೀಲ ಮೋಹಿತ್ ಕುಂಡಡ್ಕ ಎಲ್ಯಣ್ಣ ಗೌಡ ಜಾಲ್ತಾರು, ಅಧ್ಯಕ್ಷರು,ಸೌಜನ್ಯ ನ್ಯಾಯಪರ ಹೋರಾಟ ಸಮಿತಿ, ಎಡಮಂಗಲ ಭಾಗವಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.
ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿ ಸೌಜನ್ಯಳ ಮೇಲೆ ನಡೆದ ಅಮಾನುಷ ಕೃತ್ಯ ಮನುಕುಲವನ್ನು ತಲ್ಲಣಗೊಳಿಸಿತ್ತು. ಆದರೆ ಪ್ರಕರಣ ನಡೆದು ಹಲವು ವರ್ಷ ಕಳೆದರೂ ನೈಜ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಪ್ರಕರಣದ ಅಂದಿನ ತನಿಖಾಧಿಕಾರಿ ಸರಿಯಾದ ತನಿಖೆ ನಡೆಸದೆ, ಹಳ್ಳ ಹಿಡಿಸಿದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆದೇಶಿಸಿ ಇಡೀ ಕರ್ನಾಟಕ ರಾಜ್ಯ ಮತ್ತು ಹೊರ ರಾಜ್ಯದಲ್ಲೂ ಸೌಜನ್ಯಳಿಗಾದ ಅನ್ಯಾಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.