ನ್ಯೂಸ್ ನಾಟೌಟ್ : ಸುಳ್ಯದ ಕೊಡಗು ಸಂಪಾಜೆ ಗ್ರಾಮದ ಕಡಮಕಲ್ಲು ರಬ್ಬರ್ ಎಸ್ಟೇಟ್ ನಲ್ಲಿ ಎರಡು ಕಾಡಾನೆಗಳು ಹಾಡಹಗಲಿನಲ್ಲಿಯೇ ಪ್ರತ್ಯಕ್ಷವಾಗಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ.ಕೊಡಗು-ಸಂಪಾಜೆ ಭಾಗದಲ್ಲಿ ಆಗಾಗ ಇಂತಹ ಘಟನೆಗಳು ಮರುಕಳಿಸುತ್ತಿದ್ದು,ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಚ್ 2ರ ಬೆಳಿಗ್ಗೆ 10.30ರ ವೇಳೆಗೆ ಸಂಪಾಜೆಯ ವ್ಯಕ್ತಿಯೊಬ್ಬರು ತಮ್ಮ ಜೀಪಿನಲ್ಲಿ ಬರುತ್ತಿದ್ದ ವೇಳೆ ಈ ಎರಡು ಕಾಡಾನೆಗಳು ಕಡಮಕಲ್ಲು ರಬ್ಬರ್ ಎಸ್ಟೇಟ್ ಬಳಿ ಕಂಡು ಬಂದಿವೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಈ ಮಾಹಿತಿ ನೀಡಲಾಯಿತು.ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪಟಾಕಿ ಮೂಲಕ ಕಾಡಿಗೆ ಓಡಿಸಿದರೆಂದು ತಿಳಿದುಬಂದಿದೆ.
ಇನ್ನು ನಿನ್ನೆಯಷ್ಟೇ (ಮಾ.೧೨) ಉಪ್ಪಿನಂಗಡಿಯ ಮೊಗೇರಡ್ಕ ಎಂಬಲ್ಲಿ ಕಾಡಾನೆಯೊಂದು ಬೆಳ್ಳಂಬೆಳಗ್ಗೆ ಸಾವರ್ಜನಿಕರಿಗೆ ದರ್ಶನ ನೀಡಿತ್ತು.ನದಿ ನೀರಿನಲ್ಲಿ ಸ್ವಲ್ಪ ಹೊತ್ತು ಆಟ ಆಡಿ,ಅಲ್ಲೇ ವಾಕಿಂಗ್ ಮಾಡುತ್ತಾ ಆನಂದಿಸಿದ ವಿಡಿಯೋವೊಂದು ಸಕತ್ ವೈರಲ್ ಆಗಿತ್ತು.ಇದರ ಬೆನ್ನಲ್ಲೇ ದ.ಕ. ಜಿಲ್ಲೆಯ ಅನೇಕ ಕಡೆಗಳಲ್ಲಿ ತೋಟಗಳಿಗೆ ನುಗ್ಗಿ ಕಾಡಾನೆಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು,ಹಾನಿ ಮಾಡುತ್ತಿರುವ ಘಟನೆ ಆಗಾಗ ವರದಿಯಾಗುತ್ತಲೇ ಇವೆ.