ನ್ಯೂಸ್ ನಾಟೌಟ್: ಮೂರು – ನಾಲ್ಕು ತಿಂಗಳಿನಿಂದ ನಿರಾಶಾದಾಯಕವಾಗಿದ್ದ ಮಂಗಳೂರು ಬಿಳಿ ಚಾಲಿ ಅಡಿಕೆ ಧಾರಣೆ ಇದ್ದಕ್ಕಿದ್ದಂತೆ ಜಿಗಿತ ಕಂಡು ಬಂದಿದೆ.
ಋುತುಮಾನದ ಕೊನೆಯ ಕೊಯ್ಲುಕೂಡ ಮುಗಿದು ಅಡಿಕೆ ಒಣಗುತ್ತಿರುವ ಸೀಸನ್ ಇದಾಗಿದ್ದು, ಮಾರುಕಟ್ಟೆಗೆ ಆವಕ ಸೆಳೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಹೊಸ ಅಡಿಕೆ ಧಾರಣೆ 3 ತಿಂಗಳಿನಿಂದ 320 ರಿಂದ 340ರ ಆಸುಪಾಸಿನಲ್ಲೇ ಇತ್ತು.
320ರ ಕನಿಷ್ಠ ದರ ಮತ್ತು 340ರ ಗರಿಷ್ಠ ದರದಲ್ಲಿ ಖರೀದಿಯಾಗುತ್ತಿತ್ತು. ಇದೀಗ ಕ್ಯಾಂಪ್ಕೊ ಹಠಾತ್ ಕಿಲೊ ಒಂದಕ್ಕೆ 5 ರೂ. ಏರಿಸಿದೆ. ಇದರ ಪರಿಣಾಮ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಯಲ್ಲಿ 347ರ ಧಾರಣೆಯಲ್ಲಿಹೊಸ ಅಡಿಕೆ ಖರೀದಿಯಾಗಿದೆ. ಪುತ್ತೂರು ಮತ್ತು ಬೆಳ್ತಂಗಡಿಯ ಖಾಸಗಿ ಮಾರುಕಟ್ಟೆಯಲ್ಲಿ 350ಕ್ಕೆ ಖರೀದಿಯಾಗಿದೆ ಎಂದು ವರದಿ ತಿಳಿಸಿದೆ.