ನ್ಯೂಸ್ ನಾಟೌಟ್: ರಾಜಕೀಯವಾಗಿ ನನ್ನ ವಿರೋಧ ಮಾಡಿದವರು ಸಾವನ್ನಪ್ಪಿದ್ದಾರೆ. ಅವರಿಗೆ ದೇವರೇ ಶಿಕ್ಷೆ ನೀಡಿದ್ದಾನೆ ಎಂಬ ತಮ್ಮ ಹೇಳಿಕೆಯನ್ನು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಸಮರ್ಥಿಸಿಕೊಂಡಿದ್ದಾರೆ. ರಾಜಕೀಯವಾಗಿ ನನಗೆ ವಿರೋಧ ಮಾಡಲು ಬಂದವರು ಯಾರೂ ರಾಜಕೀಯವಾಗಿ ಉಳಿದಿಲ್ಲ ಎಂದು ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ.
ನನಗೆ 71 ವರ್ಷ ನಾನು ಉಳಿದಿದ್ದೇನಲ್ಲಾ, ಅವರು ಒಬ್ಬರಾದರೂ ಇದ್ದಾರಾ? ಎಂದು ಹೇಳಿದರು. ನಾನು ಎಂದು ಆಕ್ರೋಶವಾಗಿ ಮಾತನಾಡಿಲ್ಲ. ನೀವು ಆಕ್ರೋಶವಾಗಿ ಮಾತನಾಡಿದರೆ ನಾನು ಹೀಗೆ ಮಾತನಾಡುವೆ. ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೆರಡು ದಿನಗಳಲ್ಲಿ ಘೋಷಣೆಯಾಗುತ್ತದೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ, ನನಗೆ ಟಿಕೆಟ್ ಸಿಗುತ್ತದೆ. ನನಗೆ ಮತ್ತು ಜಿಲ್ಲಾಧ್ಯಕ್ಷರಿಗೆ ಎಲ್ಲಿಂದ ಮೆಸೇಜ್ ಬರಬೇಕು ಅಲ್ಲಿಂದ ಬಂದಿದೆ ತಿಳಿಸಿದರು. ನನ್ನ ಟಿಕೆಟ್ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಅದು ದೇವರಿಗೆ ಮಾತ್ರ ಸಾಧ್ಯ.
ಬೇಕಾದಷ್ಟು ಹಣವಿದ್ದವರು ಹಣ ಕೊಡುತ್ತೇವೆಂದು ತಿರುಗಾಡಲಿ ಅದು ಕೆಲಸಕ್ಕೆ ಬರಲ್ಲ. ಇದು ಗಟ್ಟಿ ಯಾರೂ ಏನೂ ಮಾಡಲಾಗಲ್ಲ. ರಾಜಕೀಯವಾಗಿ ನನಗೆ ವಿರೋಧ ಮಾಡಲು ಬಂದವರು ಯಾರೂ ರಾಜಕೀಯವಾಗಿ ಉಳಿದಿಲ್ಲ. ನನಗೆ 71 ವರ್ಷ ನಾನು ಉಳಿದಿದ್ದೇನಲ್ಲಾ? ಅವರು ಒಬ್ಬರಾದರೂ ಇದ್ದಾರಾ? ಅದು ದೇವರು ಕೊಟ್ಟ ಶಿಕ್ಷೆ ಯಾರು ಏನು ಮಾಡಲಾಗಲ್ಲ ಎಂದರು. ನರೇಂದ್ರ ಮೋದಿ ಅವರಿಗೆ ಹೇಗೆ ದೈವಿಶಕ್ತಿ ಇದೆಯೋ, ಅದರಂತೆ ವಿಜಯಪುರದಲ್ಲಿ ರಮೇಶ್ ಜಿಗಜಿಣಗಿಗೂ ದೈವಶಕ್ತಿ ಇದೆ. ಈಗ ನಿಮಗೆ ಗೊತ್ತಾಗಲ್ಲ, ಸಮಯ ಹತ್ತಿರ ಬಂದಾಗ ನಿಮಗೆ ಗೊತ್ತಾಗುತ್ತದೆ.
ನಾನು ಇತಿಹಾಸ ನಿರ್ಮಾಣ ಮಾಡೇ ಮಾಡ್ತೀನಿ. ಆದರೆ, ಅದನ್ನು ಹೇಳಲಾಗದು. ಇಲ್ಲಿವರೆಗೂ ಇತಿಹಾಸ ನಿರ್ಮಾಣ ಮಾಡಿಕೊಂಡು ಬಂದಿದ್ದೇನೆ. ರಾಜ್ಯದಲ್ಲಿ ದಲಿತನಾಗಿ ಯಾರು ಮಾಡಲಾರದಂತ ಕೆಲಸ ಮಾಡಿದ್ದೇನೆ. ಬೇರೆ ಬೇರೆ ಪಕ್ಷದಿಂದ ಚಿಕ್ಕೋಡಿಯಲ್ಲಿ ಮೂರು ಬಾರಿ ಲೋಕಸಭಾ ಚುನಾವಣೆ ಗೆದ್ದಿದ್ದೇನೆ. ಇದು ಇತಿಹಾಸ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.