ನ್ಯೂಸ್ ನಾಟೌಟ್ :ಜಾತ್ರೆ ಅಂದ್ರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತೆ.ಸಾವಿರಾರು ಜನ ಅಲ್ಲಿ ನೆರೆದಿರುತ್ತಾರೆ.ಹೀಗಾಗಿ ಭಕ್ತರು ರಥೋತ್ಸವವನ್ನು ಕಣ್ತುಂಬಿ ಕೊಳ್ಳಲೆಂದೇ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ.ಇದೀಗ ಇಲ್ಲೊಬ್ಬ ಬಾಲಕಿ ರಥೋತ್ಸವ ನೋಡಲೆಂದು ಬಂದಿದ್ದು, ಇನ್ನೇನು ರಥೋತ್ಸವ ನೋಡುತ್ತಾ ಮೈ ಮರೆತಿದ್ದಳು.ಅಷ್ಟರಲ್ಲಾಗಲೇ 7 ಮಂದಿ ಸೇರಿ ಬಾಲಕಿಯನ್ನು ಅಪಹರಣಗೈದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಪ್ರಕರಣ ತಮಿಳುನಾಡಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಮಾ.9 ರಂದು ಈ ಘಟನೆ ನಡೆದಿದೆ.
17 ವರ್ಷದ ಬಾಲಕಿ ವೀರಕುಮಾರಸ್ವಾಮಿ ದೇವಸ್ಥಾನದ ರಥೋತ್ಸವ ನೋಡಲು ವೆಲ್ಲಕೋವಿಲ್ಗೆ ಗ್ರಾಮಕ್ಕೆ ಭೇಟಿ ನೀಡಿದ್ದಳು. ಈ ವೇಳೆ ಏಳು ಮಂದಿ ಬಾಲಕಿಯನ್ನು ಅಪಹರಿಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.ಈ ಸಂಬಂಧ ಪೊಲೀಸರಿಗೆ ಬಾಲಕಿಯ ಮನೆಯವರು ದೂರನ್ನು ನೀಡಿದ್ದಾರೆ. ಪೊಲೀಸರು ಘಟನಾ ಸಂಬಂಧ ಆರೋಪಿಗಳನ್ನು ಬಂಧಿಸಲು ಎರಡು ವಿಶೇಷ ತಂಡವನ್ನು ರಚಿಸಿ, ಕಾಮರಾಜಪುರಂನ 32 ವರ್ಷದ ಆರೋಪಿ ಮತ್ತು 29 ವರ್ಷದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳ ತೀವ್ರ ವಿಚಾರಣೆ ಬಳಿಕ ಉಳಿದವರನ್ನು ಬಂಧಿಸಲಾಗಿದೆ. ಕೃತ್ಯವೆಸಗಿದ 7 ಮಂದಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.ಈ ಪ್ರಕರಣ ಸಂಬಂಧ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.