ನ್ಯೂಸ್ ನಾಟೌಟ್: ಜೀವನದಲ್ಲಿ ಹಾಗಾಗಬೇಕು , ಹೀಗಾಗಬೇಕು ಎನ್ನುತ್ತಾ ಕೆಲವರು ಸಾವಿರ ಕನಸುಗಳನ್ನು ಕಾಣುತ್ತಿರುತ್ತಾರೆ.ಆ ಕನಸುಗಳು ನನಸಾಗಬೇಕಾದರೆ ಬೇರೆ ಬೇರೆ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುತ್ತದೆ.ಉನ್ನತ ಶಿಕ್ಷಣವನ್ನು ಪಡೆಯಬೇಕಾಗುತ್ತದೆ.ಹೀಗೆ ಉನ್ನತ ಶಿಕ್ಷಣವನ್ನು ಪಡೆಯಲು ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಕೆಲವೊಮ್ಮೆ ಮನೆ ಬಿಟ್ಟು ವಿದೇಶಕ್ಕೂ ತೆರಳಬೇಕಾಗುತ್ತದೆ.ಹೌದು, ಉತ್ತಮ ಆದಾಯ ಗಳಿಸುವ ಭರವಸೆಯೊಂದಿಗೆ ಅತ್ಯುತ್ತಮ ವೈದ್ಯೆಳಾಗಬೇಕೆಂಬ ಕನಸನ್ನು ಹೊತ್ತು, ತನ್ನ ಹುಟ್ಟೂರನ್ನೇ ತೊರೆದು ವಿದೇಶಕ್ಕೆ ಹೋದ ಯುವತಿಯೊಬ್ಬಳು ಇದೀಗ ದುರಂತ ಅಂತ್ಯವಾಗಿರುವ ಘಟನೆ ಬಗ್ಗೆ ವರದಿಯಾಗಿದೆ.
ಇತ್ತೀಚೆಗೆ ಆಂಧ್ರ ಪ್ರದೇಶ ಮೂಲದ ಯುವ ವೈದ್ಯೆ ಆಸ್ಟ್ರೇಲಿಯಾದಲ್ಲಿ ಕೊನೆಯುಸಿರೆಳೆದಿದ್ದಾಳೆ. ಫ್ರೆಂಡ್ಸ್ ಜತೆ ಟ್ರೆಕ್ಕಿಂಗ್ಗೆ ತೆರಳಿದ ಯುವ ವೈದ್ಯೆ ಬಾರದ ಲೋಕಕ್ಕೆ ತೆರಳಿದ್ದಾಳೆ. ಉಜ್ವಲಾ ಉಸಿರು ಚೆಲ್ಲಿದ ಯುವತಿ ಎಂದು ಗುರುತಿಸಲಾಗಿದೆ. ಈಕೆ ಆಂಧ್ರದ ಕೃಷ್ಣ ಜಿಲ್ಲೆಯ ಗನ್ನವರಂ ನಿವಾಸಿ. ವೈದ್ಯೆಯಾಗಿ ಉನ್ನತ ಸ್ಥಾನಕ್ಕೇರಬೇಕು ಅಂದುಕೊಂಡಿದ್ದ ಮಗಳ ಈ ವಿಚಾರ ಹೆತ್ತವರನ್ನು ಬೆಚ್ಚಿ ಬೀಳಿಸಿದೆ. ಉಜ್ವಲಾ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನ ಬಾಂಡ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮುಗಿಸಿ, ರಾಯಲ್ ಬ್ರಿಸ್ಬೇನ್ನ ಮಹಿಳಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೆಲ ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದರು. ಆದರೆ ಅನಿರೀಕ್ಷಿತವಾಗಿ ಕೊನೆಯುಸಿರೆಳೆದಿದ್ದಾರೆ. ವೈದ್ಯೆಯಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಮಗಳು ಹಠಾತ್ ಇನ್ನಿಲ್ಲವಾಗಿದ್ದು, ಪೋಷಕರಿಗೆ ಭಾರಿ ಆಘಾತವಾಗಿದೆ.