ನ್ಯೂಸ್ ನಾಟೌಟ್ : ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೋನ್ಗಳಲ್ಲಿ ಅಪ್ಲಿಕೇಶನ್ಗಳು ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ತುಂಬಾ ಅಗತ್ಯ.ಯಾವುದೇ ಆ್ಯಪ್ ಬೇಕಾದರೂ ನಾವು ಗೂಗಲ್ ಪ್ಲೇ ಸ್ಟೋರ್ಗೆ ಹೋಗ್ತೀವಿ.ಇಲ್ಲಿ ಬಳಕೆದಾರರಿಗೆ ಬೇಕಾದ ಹೊಸ ಅಪ್ಲಿಕೇಶನ್ಗಳು ಇದ್ದು ಇದನ್ನು ಡೌನ್ಲೋಡ್ ಮಾಡಬಹುದು. ಆದರೆ, ಅತಿ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೂ (Wi-Fi ಅಥವಾ 5G), ಇದುವರೆಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಒಂದು ಬಾರಿಗೆ ಒಂದೇ ಒಂದು ಅಪ್ಲಿಕೇಶನ್ ಅನ್ನು ಮಾತ್ರ ಡೌನ್ಲೋಡ್ ಮಾಡಲು ಮಾತ್ರ ಸಾಧ್ಯವಾಗುತ್ತಿತ್ತು.ಆದರೆ, ಶೀಘ್ರದಲ್ಲೇ ಈ ಸಮಸ್ಯೆ ನಿವಾರಣೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಲ್ಲಿ ಏಕಕಾಲದಲ್ಲಿ ಹಲವು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಅನುಕೂಲವನ್ನು ಕಲ್ಪಿಸುವ ಉದ್ದೇಶದಿಂದ ಗೂಗಲ್ ಪ್ರಸ್ತುತ ಹೊಸ ಮಾರ್ಗವನ್ನು ಪರೀಕ್ಷಿಸುತ್ತಿದೆ.ಗೂಗಲ್ ಪ್ಲೇ ಸ್ಟೋರ್ನ ಹೊಸ ಅಪ್ಡೇಟ್ (ಆವೃತ್ತಿ 40.0.13) ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಈ ವೈಶಿಷ್ಟ್ಯದ ಸಹಾಯದಿಂದ ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೋನ್ಗಳಲ್ಲಿ ಏಕಕಾಲದಲ್ಲಿ ಅನೇಕ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬಹುದು ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಸದ್ಯ ಈ ವೈಶಿಷ್ಟ್ಯ ಪರೀಕ್ಷಾ ಹಂತದಲ್ಲಿದ್ದು ಕೆಲವರಷ್ಟೇ ಇದನ್ನು ಪ್ರಯತ್ನಿಸುತ್ತಿದ್ದು ಅದರ ಸ್ಕ್ರೀನ್ಶಾಟ್ಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಈ ಒಂದು ಸೌಲಭ್ಯದಲ್ಲಿ ಗೂಗಲ್ ಪ್ಲೇ ಸ್ಟೋರ್ನ ಹೊಸ ಅಪ್ಡೇಟ್ ಜಾರಿಗೆ ಬಂದ ನಂತರ ಬಳಕೆದಾರರು ಏಕಕಾಲದಲ್ಲಿ 5 ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಆದಾಗ್ಯೂ, ಈ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೂ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲವಾದರೂ ಸದ್ಯದಲ್ಲೇ ಚಾಲ್ತಿಗೆ ಬರಬಹುದು ಎನ್ನಲಾಗಿದೆ.