ನ್ಯೂಸ್ ನಾಟೌಟ್ : ಸಿಬಿಎಸ್ಇ’ಯು 19ನೇ ಆವೃತ್ತಿಯ ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ (CTET) ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.2024ನೇ ಸಾಲಿನ ಜುಲೈ ಸೆಷನ್ ಸಿಟಿಇಟಿ ಪರೀಕ್ಷೆಯನ್ನು ದಿನಾಂಕ 07-07-2024 ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.
2024ನೇ ಸಾಲಿನ ಜುಲೈ ಸೆಷನ್ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಒಟ್ಟು 20 ಭಾಷೆಗಳಲ್ಲಿ 136 ಸಿಟಿಗಳಲ್ಲಿ ದೇಶದಾದ್ಯಂತ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ನಡೆಸುವುದಾಗಿ ತಿಳಿಸಿದೆ.ಆನ್ಲೈನ್ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 07-03-2024 ಮತ್ತು ಆನ್ಲೈನ್ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 02-04-2024 ರ ರಾತ್ರಿ 11-59 ಗಂಟೆವರೆಗೆ. ಸಿಟಿಇಟಿ 2024 ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 02-04-2024 ರ ರಾತ್ರಿ 11-59 ಗಂಟೆವರೆಗೆ.ವಿದ್ಯಾರ್ಹತೆ : ಯಾವುದೇ ಪದವಿ ಜತೆಗೆ ಬಿ.ಇಡಿ, ಬಿಪಿ.ಇಡಿ (ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ) ಪಾಸ್ ಮಾಡಿರಬೇಕು.
ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿರಿ.ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.1000. (2 ಪೇಪರ್ಗಳಿಗೆ ರೂ.1200) ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000. (2 ಪೇಪರ್ಗಳಿಗೆ ರೂ.1200) ಹಾಗು SC / ST / ಅಂಗವಿಕಲ ಅಭ್ಯರ್ಥಿಗಳಿಗೆ ರೂ.500. (2 ಪೇಪರ್ಗಳಿಗೆ ರೂ.600) ಎಂದು ನಿರ್ಧರಿಸಲಾಗಿದೆ.ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಹಾಕಲು https://ctet.nic.in/ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.ಸಿಇಟಿ ಪರೀಕ್ಷೆಯನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು 2024 ರ ಜುಲೈ 07 ರಂದು ನಡೆಸಲಿದ್ದು, ಪರೀಕ್ಷೆ ಶಿಫ್ಟ್ ಸಮಯವನ್ನು ಸಿಟಿಇಟಿ ಪ್ರವೇಶ ಪತ್ರದಲ್ಲಿ ಚೆಕ್ ಮಾಡಿಕೊಳ್ಳಬಹುದು. ಸಿಟಿಇಟಿ ಪೇಪರ್-2 ಪರೀಕ್ಷೆ ಬೆಳಿಗ್ಗೆ 9-15 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ನಡೆಯಲಿದೆ. ಪೇಪರ್-1 ಪರೀಕ್ಷೆಯು ಮಧ್ಯಾಹ್ನ 02-15 ಗಂಟೆಗೆ ಆರಂಭವಾಗಿ 05-00 ಗಂಟೆಗೆ ಕೊನೆಗೊಳ್ಳಲಿದೆ ಎಂದು ವರದಿ ತಿಳಿಸಿದೆ.