ನ್ಯೂಸ್ ನಾಟೌಟ್: ಬೆಂಗಳೂರು ಹೊಟೇಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಬಿಜೆಪಿ ನಾಯಕ ಯತ್ನಾಳ್ ಮಾತನಾಡಿದ್ದು,ಬಾಂಬ್ ಸ್ಪೋಟ ಇದೊಂದು ವ್ಯವಸ್ಥಿತ ಜಾಲ ಎಂದು ಕಿಡಿಕಾರಿದ್ದಾರೆ. ಬಾಂಬ್ ಸ್ಪೋಟಕ್ಕೂ ಪಾಕಿಸ್ತಾನ್, ಐಎಸ್ಐಎಸ್ಗೂ ಲಿಂಕ್ ಇದೆ ಎಂದಿರುವ ಅವರು ಇದು ದೇಶವನ್ನ ಅಭದ್ರಗೊಳಿಸುವ ಸಂಚು ಎಂದು ಕೆಂಡಾಮಂಡಲರಾದರು.ಮಾತ್ರವಲ್ಲ ಪಿಎಫ್ಐ ಚಟುವಟಿಕೆಗಳಿಗೂ ಲಿಂಕ್ ಇದೆ. ಸ್ಪೋಟದ ಹಿಂದೆ ಭಾರತವನ್ನ ಇಸ್ಲಾಮೀಕರಣ ಮಾಡುವ ಸಂಚಿದೆ ಎಂದರು. ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟಿಕರಣದಿಂದ ಬಾಂಬರ್ ಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಯತ್ನಾಳ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬಳಿಕ ಪಾಕಿಸ್ತಾನ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಅವರು “ನಾಸೀರ್ ಹುಸೇನ್ ಗೆ ಪ್ರಮಾಣ ವಚನ ನೀಡಬಾರದು. ಘೋಷಣೆ ಕೂಗಿದ ವ್ಯಕ್ತಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಇದರಲ್ಲಿ ನಾಸೀರ್ ಹುಸೇನ್ ಪಾತ್ರ ಇದ್ದೆ ಇದೆ. ಹಾಗಾಗಿ ಬಾಂಬ್ ಬ್ಲಾಸ್ಟ್ ಪ್ರಕರಣ ತನಿಖೆ ಮುಗಿಯುವವರೆಗೂ ನಾಸೀರ್ ಹುಸೇನ್ಗೆ ಪ್ರಮಾಣ ವಚನ ಕೊಡಬಾರದು. ಪ್ರಮಾಣ ವಚನ ಬೋಧಿಸದಂತೆ ಉಪರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.