ನ್ಯೂಸ್ ನಾಟೌಟ್ : ದಕ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳಲ್ಲೊಂದಾದ ಅಡಿಕೆಗೆ ಬಾಧಿಸಿರುವ ಎಲೆಚುಕ್ಕಿ ರೋಗದಿಂದಾಗಿ ರೈತರು ಕಂಗಾಲಾಗಿದ್ದಾರೆ.ಅದರಲ್ಲೂ ಸುಳ್ಯ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದ್ದು,ಅಡಿಕೆ ಬೆಳೆ ಬೆಳೆದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈ ಬಗ್ಗೆ ವಿಸ್ತಾರವಾದ ಸಂಶೋಧನೆ ನಡೆಸಲಾಗಿದ್ದು ಇದು ಹವಾಮಾನ ಆಧಾರಿತ ರೋಗ ಎಂದು ಇದೀಗ ತಿಳಿದುಬಂದಿದೆ. ರೋಗ ನಿಯಂತ್ರಣಕ್ಕೆ ಕಂಡುಹಿಡಿಯಲಾದ ಔಷಧವನ್ನು (ರಾಸಾಯನಿಕ ಸಿಂಪಡಣೆ) ಕೇಂದ್ರಕ್ಕೆ ಕಳುಹಿಸಿ ಒಪ್ಪಿಗೆ ಪಡೆದಿದ್ದೇವೆ.ಅದನ್ನು ಎಲ್ಲರಿಗೂ ತಲುಪಿಸಿ ಎಂದು ತಿಳಿಸಿದ್ದಾರೆ ಅದರಂತೆ ನಡೆಯುತ್ತಿದೆ ಎಂದು ಕಾಸರಗೋಡು ಸಿಪಿಸಿಆರ್ಐ ನಿರ್ದೇಶಕ ಡಾ| ಕೆ.ಬಿ. ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಡಿಕೆ ಹಳದಿ ರೋಗ ಕ್ಯಾನ್ಸರ್ನಂತೆ.ಒಮ್ಮೆ ಆರಂಭವಾದರೆ ಮುಗಿಯದ ಕಾಯಿಲೆ.ಅದಕ್ಕಾಗಿ ಮೊದಲ ಅಥವಾ ಎರಡನೇ ಹಂತದಲ್ಲಿ ನಿಯಂತ್ರಣ ಸಾಧ್ಯವಾದರೆ ಮಾತ್ರ ರೋಗ ನಿಯಂತ್ರಿಸಬಹುದಾಗಿದೆ. ಬಳಿಕ ಅದರ ನಿಯಂತ್ರಣ ಸಾಧ್ಯ ಕಷ್ಟ. ಅಡಿಕೆ ಹಳದಿ ರೋಗಕ್ಕೆ ಕಾರಣದ ಬಗ್ಗೆ ಇನ್ನೂ ನಿಖರತೆ ಕಂಡುಬಂದಿಲ್ಲ ಎಂದರು.ಸಿಪಿಸಿಆರ್ಐ ಕಾಸರಗೋಡಿನ ಡಾ| ನಿರಲ್, ಸಿಪಿಸಿಆರ್ಐ ವಿಟ್ಲದ ಡಾ| ವಿನಾಯಕ ಹೆಗ್ಡೆ, ಕಾಸರಗೋಡು ಸಿಪಿಸಿಆರ್ಐ ಪ್ರಧಾನ ವಿಜ್ಞಾನಿಗಳಾದ ಡಾ| ರವಿ ಭಟ್, ಡಾ| ಸಂಶುದ್ದೀನ್, ಪ್ರಮುಖರಾದ ಶ್ಯಾಮ್ ಪ್ರಸಾದ್, ಗೋಪಾಲಕೃಷ್ಣ, ಡಾ| ದಿವಾಕರ್ ಉಪಸ್ಥಿತರಿದ್ದರು.