ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಪುಂಡ ಪೊರ್ಕಿ ಕಾಮಣ್ಣರ ಹಾವಳಿ ಜೋರಾದಂತಿದೆ. ‘ನ್ಯೂಸ್ ನಾಟೌಟ್’ ಗ್ರೂಪ್ ಗಳಿಂದ ಯುವತಿಯರ ಮೊಬೈಲ್ ನಂಬರ್ ಕದ್ದು ವಾಟ್ಸಾಪ್ ಮೂಲಕ ಚಾಟ್ ಮಾಡೋದನ್ನು ವ್ಯಕ್ತಿಯೊಬ್ಬ ಶುರು ಮಾಡಿಕೊಂಡಿರುವ ಬಗ್ಗೆ ನ್ಯೂಸ್ ನಾಟೌಟ್ ಕಚೇರಿಗೆ ದೂರು ಬಂದಿದೆ. ನ್ಯೂಸ್ ನಾಟೌಟ್ ಗ್ರೂಪ್ 12 ರಲ್ಲಿರುವ ಸಬೀರ್ ಹೆಸರಿನ ವ್ಯಕ್ತಿಯೊಬ್ಬ ಯುವತಿಯೊಬ್ಬಳಿಗೆ ಮೆಸೇಜ್ ಮಾಡಿ ಕಿರಿಕಿರಿ ಮಾಡುತ್ತಿದ್ದಾನೆ ಎಂದು ಹರಿಶ್ಚಂದ್ರ ಗೌಡ ಅನ್ನುವವರು ನ್ಯೂಸ್ ನಾಟೌಟ್ ಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕೂಡ ಗಮನಿಸಬೇಕಾದ ಅಂಶವನ್ನು ನಾವಿಲ್ಲಿ ವಿವರಿಸುತ್ತಿದ್ದೇವೆ. ಮೊದಲನೆಯದ್ದು ಅಪರಿಚಿತ ಸಂಖ್ಯೆಗಳ ಮೊಬೈಲ್ ನಂಬರ್ ನಿಂದ ನಿಮಗೆ ಚಾಟ್ ಬಂದರೆ ತಕ್ಷಣ ನಿರ್ಲಕ್ಷ್ಯವಹಿಸಿ. ಚಾಟ್ ಅಥವಾ ಕರೆ ಮಾಡಿ ಬೆದರಿಕೆ ಹಾಕಿದರೆ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಅಥವಾ ನಂಬರ್ ಅನ್ನು ಬ್ಲಾಕ್ ಮಾಡಿ. ನ್ಯೂಸ್ ನಾಟೌಟ್ ಚಾನೆಲ್ ಓದುಗರ/ವೀಕ್ಷಕರ ಹಿತಕ್ಕಾಗಿ ವಾಟ್ಸಾಪ್ ಗ್ರೂಪ್ ಗಳನ್ನು ತೆರೆದಿದೆ.
ಪ್ರತಿ ದಿನ ನ್ಯೂಸ್ ಗಳನ್ನು ತಲುಪಿಸುವುದು ನಮ್ಮ ಕೆಲಸ. ಮಾಹಿತಿ, ಅಂಕಣ, ವಿಶೇಷ ಸುದ್ದಿಗಳೊಂದಿಗೆ ನಾವು ನಿಮ್ಮ ಜೊತೆಗೆ ಸದಾ ಇರುತ್ತೇವೆ. ಸಾವಿರಾರು ಓದುಗರು, ವೀಕ್ಷಕರು ನಮ್ಮ ವಿವಿಧ ಗ್ರೂಪ್ ಗಳಲ್ಲಿದ್ದಾರೆ. ವಾಟ್ಸಾಪ್, ಯುಟ್ಯೂಬ್ , ಫೇಸ್ ಬುಕ್ , ಇನ್ಸ್ಟಾಗ್ರಾಮ್ , ಟ್ವಿಟ್ಟರ್, ಕೂ ಆಪ್ ಸೇರಿದಂತೆ ಲಕ್ಷಾಂತರ ವೀಕ್ಷಕ ಬಳಗವನ್ನು ಹೊಂದಿರುವ ನ್ಯೂಸ್ ನಾಟೌಟ್ ಎಂದಿಗೂ ಓದುಗರ ಘನತೆಗೆ ಧಕ್ಕೆ ತರುವ ವಿಚಾರವನ್ನು ಸಹಿಸುವುದಿಲ್ಲ. ಅವಶ್ಯಕತೆ ಬಿದ್ದರೆ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದು ಮುಂದು ನೋಡುವುದಿಲ್ಲ ಅನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇವೆ.
– ಸಂಪಾದಕರು
ನ್ಯೂಸ್ ನಾಟೌಟ್ ರಾಜ್ಯ ಮಟ್ಟದ ಕನ್ನಡ ಡಿಜಿಟಲ್ ಮಾಧ್ಯಮ