ಕರಾವಳಿಸುಳ್ಯ

ಅರಂತೋಡು:ಕೆವಿಜಿ ಸಮೂಹ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ,ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮ ಹೇಗಿತ್ತು?ಇಲ್ಲಿದೆ ಡಿಟೇಲ್ಸ್‌…

ನ್ಯೂಸ್ ನಾಟೌಟ್:ಕೆವಿಜಿ ಸಮೂಹ ಸಂಸ್ಥೆಗಳು, ಸುಳ್ಯ ಮಹಿಳಾ ಮಂಡಲಗಳ ಒಕ್ಕೂಟ (ರಿ) ಹಾಗೂ ಪಯಸ್ವಿನಿ ಮಹಿಳಾ ಮಂಡಲ (ರಿ) ತೊಡಿಕಾನ ಇದರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.

ಮಾರ್ಚ್ 4ರಂದು ಸುಳ್ಯದ ಅರಂತೋಡು ಸಮೀಪವಿರುವ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಭಾಂಗಣದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಯಸ್ವಿನಿ ಮಹಿಳಾ ಮಂಡಲ ಆಧ್ಯಕ್ಷರು , ಶ್ರೀಮತಿ ಚಂದ್ರಕಲಾ ಕುತ್ತಮೊಟ್ಟೆ ನೆರೆದಿರುವವರನ್ನು ಸ್ವಾಗತಿಸಿದರು. ಬಳಿಕ ಡಾ| ರಶ್ಮಿ ಕೆ.ಎಸ್ ಮಹಿಳೆಯರಿಗೆ ಆರೋಗ್ಯ ಮಾಹಿತಿ ನೀಡಿದರು. ಡಾ.ಹರ್ಷಿತಾ ಪುರು‍ಷೋತ್ತಮ ಶಿಬಿರದ ಸೌಲಭ್ಯಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.

ಈ ವೇಳೆಕಾರ್ಯಕ್ರಮದ ಮುಖ್ಯ ಭಾಗವಾದ ಅರೋಗ್ಯ ತಪಾಸಣೆ ನಡೆಯಿತು. ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರಾದ ಡಾ| ಸಹನಾ, ಡಾ| ದೀಪ್ತಿ, ಡಾ| ಸ್ಮಿತಾ ಹರ್ಷವರ್ಧನ ಹಾಗೂ ಡಾ| ನಿಲೋಫರ್, ಕಲಿಕಾ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ನಂತರ ಪಯಸ್ವಿನಿ ಮಹಿಳಾ ಮಂಡಲದ ಕಾರ್ಯದರ್ಶಿ ದೀಪಿಕಾ ಕುಂಟುಕಾಡು ವಂದನಾರ್ಪಣೆಗೈದರು. ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು.

Related posts

ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್‌ ಪತ್ತೆ..! ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧ, ಕರ್ನಾಟಕ ಗಡಿಯಲ್ಲೂ ನಿಗಾ ಸಾಧ್ಯತೆ..!

ಮಂಗಳೂರು:ಹಾಸ್ಟೆಲ್ ಕಟ್ಟಡದಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ,ಡೆತ್ ನೋಟ್ ಪತ್ತೆ

ನೆಲ್ಯಾಡಿ: ಉದ್ಯೋಗ ನೋಂದಣಿ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ