ನ್ಯೂಸ್ ನಾಟೌಟ್: NIA (ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳ ತಂಡ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದೆ. ಕಲಾಯಿತೋಡು ಎಂಬಲ್ಲಿ ಮಂಗಳವಾರ ಬೆಳ್ ಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು ಹಲವು ಮಹತ್ವದ ದಾಖಲೆಯನ್ನು ಕಲೆ ಹಾಕಿದೆ. ಇನ್ನೂ ಹಲವು ಕಡೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ಏಳು ರಾಜ್ಯಗಳ ೧೭ ಸ್ಥಳಗಳಲ್ಲಿ ಉಗ್ರ ಕೃತ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿ ಎನ್ಐಎ ದಾಳಿ ನಡೆಸಿದೆ. ದಾಳಿ ನಡೆದಿರುವುದೇಕೆ..? ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ ಅಂದರೆ ಅದರಲ್ಲಿ ಮಹತ್ವದ ವಿಚಾರಗಳು ಇದ್ದೇ ಇರುತ್ತದೆ. ಈ ಹಿಂದೆ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಯಾದ ಸಂದರ್ಭದಲ್ಲಿ ಎನ್ಐಎ ತಂಡ ಹಲವು ಸಲ ಸುಳ್ಯ ತಾಲೂಕಿನ ವಿವಿಧ ಕಡೆ ದಾಳಿ ನಡೆಸಿದ್ದನ್ನು ಸ್ಮರಿಸಬಹುದು.
ಇದೀಗ ಮತ್ತೆ ಎನ್ ಐಎ ದಾಳಿ ನಡೆಸಿರುವುದು ಪ್ರವೀಣ್ ನೆಟ್ಟಾರ್ ಹತ್ಯೆಯ ಕೇಸ್ ಗೆ ಸಂಬಂಧಪಟ್ಟಂತೆ ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ನಡೆದಿರುವ ಬಾಂಬ್ ಬ್ಲಾಸ್ಟ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಸುಳ್ಯಕ್ಕೆ ಆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ಏನಾದರೂ ಸಂಬಂಧ ಇದೆಯೇ..? ಅನ್ನುವುದು ಈಗ ನಿಗೂಢವಾಗಿದೆ. ಈ ವಿಚಾರದ ಬಗ್ಗೆ ಇನ್ನಷ್ಟೆ ಮಾಹಿತಿ ತಿಳಿದು ಬರಬೇಕಿದೆ.
ಉಗ್ರ ಶಾರಿಖ್ ಈ ಹಿಂದೆ ಕುಕ್ಕರ್ ಬಾಂಬ್ ಹಿಡಿದುಕೊಂಡು ಬಂದು ಮಂಗಳೂರಿನಲ್ಲಿ ಸ್ಫೋಟ ನಡೆಸುವುದಕ್ಕೆ ಪ್ರಯತ್ನಿಸಿ ಬಾಂಬ್ ಸಿಡಿದು ಸಿಕ್ಕಿ ಬಿದ್ದಿದ್ದ. ಆತನಿಗೂ ಈ ಸ್ಫೋಟಕ್ಕೂ ಲಿಂಕ್ ಇದೆಯಾ ಅನ್ನುವ ಕುರಿತಂತೆಯೂ ತನಿಖೆ ನಡೆಯುತ್ತಿದೆ.