ನ್ಯೂಸ್ ನಾಟೌಟ್: ನಾಳೆ (ಭಾನುವಾರ-ಮಾ.3)ಎಲಿಮಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಸೇವಾ ಭಾರತೀ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ (ರಿ) ಮತ್ತು ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಆಶ್ರಯದಲ್ಲಿ ಮಿತ್ರ ಬಳಗ ಎಲಿಮಲೆ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಡೆಯಲಿದೆ. ಕ್ಯಾನ್ಸರ್ ಶಾಸ್ತ್ರ – ಕರುಳು, ಮೂತ್ರಕೋಶ, ಸ್ತನ, ಗರ್ಭಕೋಶ, ಗರ್ಭನಾಳ, ಅಂಡಾಶಯ, ಶ್ವಾಸಕೋಶ, ಬಾಯಿ, ಗಂಟಲು, ಅನ್ನನಾಳ ಮುಂತಾದ ಕ್ಯಾನ್ಸರ್ ಗಳ ಬಗ್ಗೆ ಅರಿವಿನ ಕಾರ್ಯಕ್ರಮ ನಡೆಯಲಿದೆ. ಹೃದಯ ಶಾಸ್ತ್ರ ವಿಭಾಗದಲ್ಲಿ ಎದೆ ನೋವು,ಜನ್ಮದಾತ ಹೃದಯ ಸಂಬಂಧಿತ ಕಾಯಿಲೆಗಳು, ಹೃದಯ ಕವಾಟದ ಕಾಯಿಲೆಗಳು, ಹೃದಯ ಸ್ನಾಯುವಿನ ತೊಂದರೆ, ಹೃದಯದ ಸೋಂಕು, ಅಧಿಕ ರಕ್ತದೊತ್ತಡ ಮುಂತಾದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಬಗ್ಗೆ ತಪಾಸಣೆ ಮತ್ತು ಮಾಹಿತಿ ನಡೆಯಲಿದೆ. ಮೂತ್ರ ಶಾಸ್ತ್ರ ವಿಭಾಗದಿಂದ ಮೂತ್ರ ನಾಳದ ಸೋಂಕು, ಮೂತ್ರ ಪಿಂಡದ ಕಲ್ಲು, ಮೂತ್ರದಲ್ಲಿ ರಕ್ತ, ಪದೇ ಪದೇ ಮೂತ್ರ ವಿಸರ್ಜನೆ ಅಥವಾ ಸೋರುವಿಕೆ ಮುಂತಾದ ತೊಂದರೆಗಳ ಬಗ್ಗೆ ತಪಾಸಣೆ ನಡೆಯಲಿದೆ. ಉಚಿತ ಇ.ಸಿ.ಜಿ ಮತ್ತು PAP SMEAR (ಕ್ಯಾನ್ಸರ್ ಸಂಬಂದಿ) ಪರೀಕ್ಷೆ ಮಾಡಲಾಗುವುದು.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.