ನ್ಯೂಸ್ ನಾಟೌಟ್: ಸೇವಾ ಶುಲ್ಕ ಪಾವತಿಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತ್ ಮ್ಯಾಟ್ರಿಮೋನಿಯಂತಹ ಕೆಲವು ಜನಪ್ರಿಯ ಆ್ಯಪ್ಗಳು ಸೇರಿದಂತೆ 10 ಆ್ಯಪ್ಗಳನ್ನು ಗೂಗಲ್ ತನ್ನ ಸೇವೆಯಿಂದ ತೆಗೆದುಹಾಕಿದೆ ಎಂದು ವರದಿ ತಿಳಿಸಿದೆ.
ಆ್ಯಪ್ಗಳ ಪಾವತಿಯ ಮೇಲೆ 11% ರಿಂದ 26% ರಷ್ಟು ಶುಲ್ಕ ವಿಧಿಸುವುದನ್ನು ತಡೆಯಲು ಕೆಲವೊಂದು ಸ್ಟಾರ್ಟಪ್ಗಳು ಮುಂದಾಗಿದ್ದು ಇದುವೇ ಕಾರಣದಿಂದ ವಿವಾದ ಏರ್ಪಟ್ಟಿದೆ ಎನ್ನಲಾಗಿದೆ. ಗೂಗಲ್ ಎರಡು ಪ್ರಕಾರದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಶಕ್ತನಾಗಿದ್ದು ಸುಪ್ರೀಂ ಕೋರ್ಟ್ನ ಎರಡು ತೀರ್ಪುಗಳಿಗೆ ಅನುಸಾರವಾಗಿ ಒಂದೋ ಆ್ಯಪ್ಗಳನ್ನು ತೆಗೆದುಹಾಕುವುದು ಇಲ್ಲವೇ ಪರಿಣಾಮಕಾರಿಯಾಗಿ ಶುಲ್ಕ ವಿಧಿಸುವುದು ಎಂದು ತಿಳಿಸಿದೆ.
ಜನಪ್ರಿಯ ಮ್ಯಾಟ್ರಿಮೋನಿ ಆ್ಯಪ್ಗಳಾದ ಭಾರತ್ ಮ್ಯಾಟ್ರಿಮೋನಿ, ಕ್ರಿಶ್ಚಿಯನ್ ಮ್ಯಾಟ್ರಿಮೋನಿ, ಮುಸ್ಲಿಂ ಮ್ಯಾಟ್ರಿಮೋನಿ ಹಾಗೂ ಜೋಡಿಯಂತಹ ಆ್ಯಪ್ಗಳನ್ನು ಈಗಾಗಲೇ ಗೂಗಲ್ ನಿಂದ ತೆಗೆದುಹಾಕಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಮುರುಗವೇಲ್ ಜಾನಕಿರಾಮನ್ ತಿಳಿಸಿದ್ದಾರೆ. ಆಲ್ಫಾಬೆಟ್ ಇಂಕ್ನ ಘಟಕವು ಭಾರತ್ಮ್ಯಾಟ್ರಿಮೋನಿ ಆ್ಯಪ್ ಅನ್ನು ಚಾಲನೆ ಮಾಡುವ ಭಾರತೀಯ ಕಂಪನಿಗಳಾದ ಮ್ಯಾಟ್ರಿಮೋನಿ.
ಕಾಮ್ ಮತ್ತು ಇದೇ ರೀತಿಯ ಆ್ಯಪ್ ಆದ ಜೀವನಸಾಥಿ ಅನ್ನು ನಡೆಸುತ್ತಿರುವ ಇನ್ಫೋ ಎಡ್ಜ್, ಗೆ ಕೂಡ, ಪ್ಲೇ ಸ್ಟೋರ್ ಉಲ್ಲಂಘನೆಗಳ ನೋಟಿಸ್ಗಳನ್ನು ಕಳುಹಿಸಿದೆ ಎನ್ನಲಾಗಿದೆ. ನೋಟೀಸ್ಗಳನ್ನು ಸ್ವೀಕರಿಸಿರುವ ಎರಡೂ ಸಂಸ್ಥೆಗಳು ಇದನ್ನು ಪರಿಶೀಲಿಸುತ್ತಿದ್ದು ಅದಕ್ಕನುಸಾರವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿವೆ ಎನ್ನಲಾಗಿದೆ.