ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆವಿಜಿ ಕ್ಯಾಂಪಸ್ ನಲ್ಲಿ 5 ದಿನಗಳ ಯೋಗ ತರಬೇತಿ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿದೆ.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಸಲುವಾಗಿ ಕೆವಿಜಿ ಸಮೂಹ ಸಂಸ್ಥೆಯ ಮಹಿಳಾ ಉದ್ಯೋಗಿಗಳಿಗಾಗಿ ಯೋಗ ತರಬೇತಿ ಕಾರ್ಯಕ್ರಮ ಕೆ.ವಿ.ಜಿ. ಅಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್ನಲ್ಲಿ ಇಂದು ನಡೆಯಿತು.
ಇಂದು (ಮಾರ್ಚ್ 1) ಮುಂಜಾನೆ 6.30 ಕ್ಕೆ ಸರಿಯಾಗಿ ಈ ತರಬೇತಿ ನಡೆಯಿತು.ಈ ವೇಳೆ ಮಾತನಾಡಿದ ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಶಬಿನಾ ‘ಮಹಿಳೆಯರಿಗೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ.ಮನೆ ಕೆಲಸದ ಜತೆ ಜತೆಗೆ ಆಫೀಸ್ನಲ್ಲೂ ಕೆಲಸ ನಿರ್ವಹಿಸುವ ಮೂಲಕ ಒತ್ತಡದಲ್ಲಿರುತ್ತಾಳೆ. ಹೀಗಾಗಿ ಆಕೆಗೆ ಆರೋಗ್ಯದ ಕಡೆಗೆ ಗಮನ ಕೊಡುವಷ್ಟು ಸಮಯವಿರೋದಿಲ್ಲ.ಪ್ರತಿ ನಿತ್ಯ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ಮೀಸಲಿಟ್ಟರೆ ಆಕೆಯ ಆರೋಗ್ಯ ಸುಧಾರಣೆಯಾಗಬಲ್ಲದು.ಆದ್ದರಿಂದ ಪ್ರತಿದಿನ ಯೋಗ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ” ಎಂದು ಸಲಹೆ ನೀಡಿ ತರಬೇತಿಯನ್ನು ಪ್ರಾರಂಭಿಸಿದರು.
ಈ ವೇಳೆ ವಿವಿಧ ಯೋಗಾಸನಗಳು , ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿ ನೀಡಲಾಯಿತು.ಬೆಳಗ್ಗೆ6.30ಕ್ಕೆ ಆರಂಭಗೊಂಡ ಯೋಗ ತರಬೇತಿ ಕಾರ್ಯಕ್ರಮ 7.30ಕ್ಕೆ ಮುಕ್ತಾಯಗೊಂಡಿತು. ತರಬೇತಿಯಲ್ಲಿ ಬೆಳ್ಳಂಬೆಳಗ್ಗೆ ಬಹಳ ಹುರುಪಿನಿಂದ ಮಹಿಳೆಯರು ಪಾಲ್ಗೊಂಡರು.ಇನ್ನು ನಾಳೆಯಿಂದ ಮಾರ್ಚ್ 5 ರ ತನಕ ಕೆ.ವಿ.ಜಿ. ಅಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್ ನಲ್ಲಿ ಯೋಗ ತರಬೇತಿಯು ವಿಶಿಷ್ಟವಾಗಿ ಮೂಡಿಬರಲಿದೆ.