ನ್ಯೂಸ್ ನಾಟೌಟ್ : ತುಂಬಿದ ಕೊಡ ಯಾವತ್ತೂ ತುಳುಕೋದಿಲ್ಲ..ಅರ್ಧ ತುಂಬಿದ ಕೊಡಕ್ಕೆ ಅಬ್ಬರ ಜಾಸ್ತಿ ಎಂಬ ಮಾತಿದೆ.ಆ ಗಾದೆಗೆ ಇಲ್ಲೊಂದು ಘಟನೆ ಸಾಕ್ಷಿಯೆಂಬಂತಿದೆ..!ಹೌದು, ನೀವು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೆಸರನ್ನು ಕೇಳಿರ್ತೀರಿ. ಕೋಟಿ ಕೋಟಿ ರೂಗಳ ಒಡೆಯ.ಅವರು ಭಾರತಕ್ಕೆ ಭೇಟಿ ನೀಡಿದ್ದು, ಅವರ ವೈವಿಧ್ಯಮಯ ವಿಹಾರಗಳು ಅಂತರ್ಜಾಲದಲ್ಲಿ ವ್ಯಾಪಕ ಆಸಕ್ತಿ ಮತ್ತು ಚರ್ಚೆಯನ್ನು ಹುಟ್ಟುಹಾಕಿವೆ.ಇತ್ತೀಚೆಗೆ ಗೇಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ದಾರಿ ಬದಿಯಲ್ಲಿ ಚಹಾ ಸವಿಯುವುದನ್ನು ನೋಡಿ ಅವರ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಬಗ್ಗೆ ಪೋಸ್ಟ್ ಜೊತೆ ಬರೆದುಕೊಂಡಿರುವ ಗೇಟ್ಸ್, ‘ಭಾರತದಲ್ಲಿ ನೀವು ಎಲ್ಲಿ ನೋಡಿದರಲ್ಲಿ ನಾವೀನ್ಯತೆಯನ್ನು ಕಾಣಬಹುದು. ಸರಳ ಚಹಾ ತಯಾರಿಕೆಯಲ್ಲಿ ಕೂಡಾ’ ಎಂದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ ಡಾಲಿ ಚಾಯ್ವಾಲಾ ಬಳಿ ಹೋಗಿ ‘ಒನ್ ಚಾಯ್ ಪ್ಲೀಸ್’ ಎಂದಿದ್ದಾರೆ ಬಿಲ್ ಗೇಟ್ಸ್. ನಂತರ ಚಾಯ್ವಾಲಾ ತನ್ನ ವಿಶಿಷ್ಟ ವಿಧಾನ ಬಳಸಿ ಚಹಾವನ್ನು ತಯಾರಿಸುತ್ತಾನೆ. ಬಳಿಕ ಗೇಟ್ಸ್ ಒಂದು ಕಪ್ ಚಾಯ್ ಅನ್ನು ಕುಡಿದು ಆನಂದಿಸುತ್ತಿರುವುದನ್ನು ಕಾಣಬಹುದು. ವೀಡಿಯೋದ ಕೊನೆಯಲ್ಲಿ ಡಾಲಿ ಚಾಯ್ವಾಲಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿ, ತಾವು ಬಹಳಷ್ಟು ಚಾಯ್ ಪೇ ಚರ್ಚಾಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಗೇಟ್ಸ್ನ ಸರಳತೆಗೆ ಜನ ಫಿದಾ ಆಗಿದ್ದು, ಸ್ಥಳೀಯ ಸಂಸ್ಕೃತಿಯನ್ನು ಅರಿಯುವ, ಅದರೊಂದಿಗೆ ಬೆರೆಯುವ ಗೇಟ್ಸ್ ಗುಣ ಬಹಳ ವಿಶೇಷವಾದದ್ದು ಎನ್ನುತ್ತಿದ್ದಾರೆ ನೆಟ್ಟಿಗರು. ಈಗಾಗಲೇ Instagram ನಲ್ಲಿ ಸುಮಾರು 1.1 ಮಿಲಿಯವ್ ಲೈಕ್ಗಳು ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸುಮಾರು 6 ಮಿಲಿಯನ್ ವೀಕ್ಷಣೆಗಳನ್ನು ಸ್ವೀಕರಿಸಿದೆ.ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿ, ‘ಬಿಲ್ ಎಷ್ಟು’ ಎಂದು ಕೇಳಿದ್ದರೆ, ಇನ್ನೊಬ್ಬ ನೆಟ್ಟಿಗರೊಬ್ಬರು, ‘ಡಾಲಿ ಚಾಯ್ವಾಲಾನೇ ಅದೃಷ್ಟವಂತ. ಆತನ ಅದೃಷ್ಟ ಇನ್ನು ಬದಲಾದಂತೆಯೇ’ ಎಂದಿದ್ದಾರೆ.
ಸಾಮಾಜಿಕ ತಾಲಜಾಣಗಳನ್ನು ವೀಕ್ಷಿಸುತ್ತಾ ಇರೋರಿಗೆ ಈತನ ಪರಿಚಯವಿರಬಹುದು. ವಿಶಿಷ್ಠ ಶೈಲಿ ಹೊಂದಿರುವ ಡಾಲಿ ಚಾಯ್ವಾಲಾ ಸೆಲೆಬ್ರಿಟಿ ಚಾಯ್ವಾಲಾಗಿಂತ ಕಡಿಮೆಯಿಲ್ಲ.ಆತನ ಶೈಲಿ,ಕ್ರಮಗಳು ಮತ್ತು ಚಹಾವನ್ನು ಹಾಕುವ ರೀತಿಯನ್ನು ಜನರು ಸಕತ್ ಲೈಕ್ ಮಾಡುತ್ತಿದ್ದರು.ಈತನ ಲುಕ್ಗೆ ಜನರು ದೇಸಿ ಜಾನಿ ಡೆಪ್ ಎಂದೂ ಹೆಸರಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದ ರವೀಂದ್ರ ನಾಥ್ ಟಾಗೋರ್ ಮಾರ್ಗದಲ್ಲಿರುವ ಸ್ಥಳೀಯ ಟೀ ಜಾಯಿಂಟ್ ‘ಡಾಲಿ ಕಿ ತಾಪ್ರಿ’ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ.
ಟೀ ಅಂಗಡಿಗೆ ಭೇಟಿ ನೀಡುವ ಮುನ್ನ ಬಿಲ್ ಗೇಟ್ಸ್, ಮೈಕ್ರೋಸಾಫ್ಟ್ನ ಇಂಡಿಯಾ ಡೆವಲಪ್ಮೆಂಟ್ ಸೆಂಟರ್ ಮತ್ತು ಭುವನೇಶ್ವರದಲ್ಲಿರುವ ಸ್ಲಮ್ಗೆ ಭೇಟಿ ನೀಡಿದರು. ಮಾ.1ರಿಂದ 3ರವರೆಗೆ ಗುಜರಾತ್ನ ಜಾಮ್ನಗರದಲ್ಲಿ ನಡೆಯಲಿರುವ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿಯಿದೆ.ಅವರ ಕೊನೆಯ ಭೇಟಿಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಯೂಟ್ಯೂಬರ್ ಪ್ರಜಕ್ತಾ ಕೋಲಿ ಅವರನ್ನು ಭೇಟಿಯಾಗಿದ್ದ ಗೇಟ್ಸ್, ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸಹ ಸವಾರಿ ಮಾಡಿದ್ದರು.