ನ್ಯೂಸ್ ನಾಟೌಟ್ :ತನ್ನ ಪತಿ ಮತ್ತೊಬ್ಬ ಮಹಿಳೆಯನ್ನ ವಿವಾಹವಾಗಿದ್ದಾನೆ ಎನ್ನುವ ವಿಚಾರ ತಿಳಿದು ಪತ್ನಿ (Married Woman) ನೇಣಿಗೆ ಶರಣಾಗಿರುವ ಘಟನೆಯೊಂದು ವರದಿಯಾಗಿದೆ. ಚಿತ್ರದುರ್ಗ (Chitradurga) ತಾಲೂಕಿನ ಕೂನಬೇವು ಗ್ರಾಮದಲ್ ಈ ದುರ್ಘಟನೆ ಸಂಭವಿಸಿದ್ದು,ನೇಣಿಗೆ ಶರಣಾದ ಮಹಿಳೆಯನ್ನು ವಿಶಾಲಾಕ್ಷಿ (21) ಎಂದು ಗುರುತಿಸಲಾಗಿದೆ.ಈಕೆಯ ಮನೆಯ ಹತ್ತಿರವೇ ವಾಸವಿದ್ದ ತಿಪ್ಪೇಸ್ವಾಮಿ, ಜಿಟಿಟಿಸಿಯಲ್ಲಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ತರಬೇತಿ ಪಡೆಯುತ್ತಿದ್ದ ವಿಶಾಲಾಕ್ಷಿಯನ್ನು ಪ್ರೀತಿಸಿ ಕಳೆದ ವರ್ಷವಷ್ಟೇ ವಿವಾಹವಾಗಿದ್ದ.
ದಲಿತ ಸಮುದಾಯದ ವಿಶಾಲಾಕ್ಷಿಯೊಂದಿಗೆ ಎಸ್ಟಿ ಸಮುದಾಯಕ್ಕೆ ಸೇರಿದ ತಿಪ್ಪೇಸ್ವಾಮಿ ವಿವಾಹವಾಗಿದ್ದ ಎನ್ನಲಾಗಿದೆ. ಇದನ್ನು ತಿಪ್ಪೇಸ್ವಾಮಿ ಕುಟುಂಬಸ್ಥರು ವಿರೋಧಿಸಿದ್ದರಿಂದ ಆತ ಪತ್ನಿಯಿಂದ ದೂರವಾಗಿದ್ದ.ಇದೀಗ ದಾರಿಕಾಣದ ವಿಶಾಲಾಕ್ಷಿ ಕೂನಬೇವು ಗ್ರಾಮದಲ್ಲಿದ್ದ ತನ್ನ ತವರು ಮನೆಯಲ್ಲಿದ್ದುಕೊಂಡೇ ಮತ್ತೆ ಜಿಟಿಟಿಸಿ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದರು.ಈ ನಡುವೆ ತಿಪ್ಪೇಸ್ವಾಮಿ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾದ ವಿಚಾರ ತಿಳಿದು ವಿಶಾಲಾಕ್ಷಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.