ನ್ಯೂಸ್ ನಾಟೌಟ್ :ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಪಥದಲ್ಲಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿಂತನೆಗಳು ನಮ್ಮ ನಡುವೆ ಇನ್ನೂ ಜೀವಂತವಾಗಿವೆ. ಶಸ್ತ್ರಗಳ ಮೂಲಕ ಯುದ್ಧವನ್ನು ಗೆಲ್ಲಬಹುದು , ಆದರೆ ಮನಸ್ಸನ್ನು ಗೆಲ್ಲುವುದು ತುಂಬಾ ಕಷ್ಟ ಎನ್ನುವ ಅವರ ಮಾತುಗಳು ಇಂದಿಗೂ ಪ್ರಸ್ತುತ. ಇಂತಹ ಮಹಾನ್ ವ್ಯಕ್ತಿ 1934ರಲ್ಲಿ ಸುಳ್ಯಕ್ಕೆ ಆಗಮಿಸಿದ್ದರು ಅನ್ನೋ ವಿಚಾರ ನಿಮ್ಗೆ ಗೊತ್ತಾ?
ಹೌದು,ಈ ದಿನದ 90 ವರ್ಷಗಳ ಹಿಂದೆ ಗಾಂಧೀಜಿಯವರು ಸುಳ್ಯಕ್ಕೆ ಆಗಮಿಸಿದ್ದರು. ಈ ಹಿನ್ನಲೆಯಲ್ಲಿ ಆ ದಿನದ ನೆನಪಿಗಾಗಿ ಸುಳ್ಯದ ಗಾಂಧಿ ಚಿಂತನ ವೇದಿಕೆ ವತಿಯಿಂದ ಗಾಂಧಿ ನಡಿಗೆ ಕಾರ್ಯಕ್ರಮ ಇಂದು (ಫೆ.24 ರಂದು) ಸುಳ್ಯದಲ್ಲಿ ನಡೆಯಿತು. ಸುಳ್ಯದ ಜ್ಯೋತಿ ವೃತ್ತದಿಂದ ಆರಂಭಗೊಂಡು ಗಾಂಧಿ ನಗರದವರೆಗೆ ಗಾಂಧಿ ನಡಿಗೆಯು ನಡೆಯಿತು. ಈ ಸಂದರ್ಭ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ನಡಿಗೆಗೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಮುಖರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ,ಮಾಜಿ ಶಾಸಕ ಎಸ್.ಅಂಗಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್, ಸಂಚಾಲಕ ಚಂದ್ರಶೇಖರ ಪೇರಾಲು, ಡಾ.ಸುಂದರ ಕೇನಾಜೆ, ಶರೀಫ್ ಕಂಠಿ, ಶಂಕರ ಪೆರಾಜೆ, ಪ್ರಮುಖರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ ಎಂ.ಬಿ.ಸದಾಶಿವ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಪಯಸ್ವಿನಿ, ಜೆಸಿಐ ಸುಳ್ಯ ಸಿಟಿ ಗಾಂಧಿ ಚಿಂತನಾ ವೇದಿಕೆ , ನಗರ ಪಂಚಾಯತ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಮತ್ತು ಹಲವು ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.