ನ್ಯೂಸ್ ನಾಟೌಟ್ : ಇತ್ತೀಚೆಗೆ ರಾಮ ಮಂದಿರಕ್ಕೆ ಹೋಗುವವರ ಭಕ್ತರ ಸಂಖ್ಯೆ ಜಾಸ್ತಿಯಾಗಿದೆ. ಮಾತ್ರವಲ್ಲ ದಿನವೊಂದಕ್ಕೆ ಸಾವಿರಾರು ಭಕ್ತರು ಅಲ್ಲಿಗೆ ಬಂದು ಬಾಲ ರಾಮನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.ಹೀಗಾಗಿ ಆಯೋಧ್ಯೆಗೆ ತೆರಳಲೆಂದು ವಿಶೇಷ ರೈಲುಗಳನ್ನು ಕೂಡ ಅಲ್ಲಿಗೆ ಬಿಡಲಾಗಿದ್ದು, ಭಕ್ತರ ಸಂಖ್ಯೆ ಇಮ್ಮಡಿಯಾಗಲು ಇದು ಒಂದು ಕಾರಣವಾಗಿದೆ.
ಆದರೆ ಇಲ್ಲೊಂದು ಕಡೆ ಅನ್ಯಕೋಮಿನ ಯುವಕರ ತಂಡವೊಂದು ಆಕ್ಷೇಪಾರ್ಹ ಹೇಳಿಕೆಯೊಂದನ್ನು ನೀಡಿದ್ದು, ಭಕ್ತರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿದೆ.ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಯಾತ್ರಿಕರಿದ್ದ ಅಯೋಧ್ಯೆ ವಿಶೇಷ ರೈಲಿಗೆ ಬೆಂಕಿ ಹಚ್ಚುವುದಾಗಿ ಅನ್ಯಕೋಮಿನ ಯುವಕರ ತಂಡ ಬೆದರಿಕೆ ಹಾಕಿರುವ ಘಟನೆ ವಿಜಯಪುರದ ಹೊಸಪೇಟೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲಿಗೆ ನುಗ್ಗಿದ ಮೂವರು ಯುವಕರು ಆಕ್ಷೇಪಾರ್ಹ ಹೇಳಿಕೆಯಿಂದ ಶ್ರೀರಾಮ ಭಕ್ತರು ಕೆರಳಿದ್ದು ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು.
ಕೂಡಲೇ ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಆಗಮಿಸಿ ಭಕ್ತರ ಮನವೊಲಿಸಿದರು. ಪ್ರತಿಭಟನೆಯಿಂದಾಗಿ ರೈಲು 2 ಗಂಟೆ ತಡವಾಗಿ ಹೊರಟಿತು. ಪ್ರಕರಣ ಸಂಬಂಧ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಅಲ್ಲದೆ ಓರ್ವ ಆರೋಪಿಯನ್ನು ಗದಗದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.