ನ್ಯೂಸ್ ನಾಟೌಟ್: ಯುವ ಘಟಕ-ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಒಕ್ಕಲಿಗರ ಪ್ರೀಮಿಯರ್ ಲೀಗ್ -2024 (ವಿಪಿಎಲ್) ಅಂತರ್ ಜಿಲ್ಲಾ ಹೊನಲು ಬೆಳಕಿನ ಕ್ರಿಕೆಟ್ ಕೂಟ ಫೆ.18 ಹಾಗೂ 19ರಂದು ಮಂಗಳೂರಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಪಂದ್ಯ ಕೂಟದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷಯ್ ಕೆ.ಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅಕ್ಷಯ್ ಕೆ.ಸಿ ಅವರು, ‘ಯುವ ಸಮುದಾಯ ಒಂದುಗೂಡುವುದಕ್ಕಾಗಿ ಹಮ್ಮಿಕೊಂಡ ಇಂತಹ ಕೂಟಗಳಲ್ಲಿ ಯುವಕರು ಆಸಕ್ತಿಯಿಂದ ಪಾಲ್ಗೊಳ್ಳಬೇಕು.
ಸಮುದಾಯದ ಏಳಿಗೆಗಾಗಿ ಕೈಜೋಡಿಸಬೇಕು. ಯುವಕರ ಭಾಗವಹಿಸುವಿಕೆ ಇಲ್ಲದೆ ಸಮುದಾಯದ ಕಾರ್ಯಕ್ರಮಗಳು ಯಶಸ್ವಿಯಾಗುವುದಕ್ಕೆ ಕಷ್ಟ, ಈ ನಿಟ್ಟಿನಲ್ಲಿ ಇಂತಹ ಕ್ರಿಕೆಟ್ ಕೂಟವನ್ನು ಆಯೋಜಿಸಿರುವುದು ನಿಜಕ್ಕೂ ಖುಷಿಯ ವಿಚಾರ’ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಿರಣ್ ಬುಡ್ಲೆಗುತ್ತು ವಹಿಸಿದ್ದರು. ಗುರುದೇವ್ ಯು.ಬಿ, ರವಿ ಮುಂಗ್ಲಿಮನೆ, ಚಿದಾನಂದ ಬೈಲಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕು. ಪ್ರಜ್ಞಾ ಕಾಪಿನಡ್ಕ ಪ್ರಾರ್ಥಿಸಿದರೆ ಕಿರಣ್ ಹೊಸೊಳಿಕೆ ಧನ್ಯವಾದ ಸಮರ್ಪಿಸಿದರು. ಮೊಹನ್ ಶಿರ್ಲಾಲು ನಿರೂಪಿಸಿದರು. ಕೂಟದಲ್ಲಿ ಒಟ್ಟು 32 ಗೌಡ ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು.