ನ್ಯೂಸ್ ನಾಟೌಟ್: ಈಗ ಬಿರುಬೇಸಿಗೆ ಸಮಯ. ಭೂಮಿ ತಾಪ ಎಷ್ಟಿದೆ ಎಂದರೆ ಕೊಡಗಿನ ಜನರಿಗೂ ತಟ್ಟಿದೆ. ನೀರಿಗಾಗಿ ಜನ ಹಾಹಾಕರ ಎದುರಿಸುತ್ತಿದ್ದರೆ ಕೊಡಗು ಅರಣ್ಯ ಇಲಾಖೆ ಜನರ ಕುಡಿಯುವ ನೀರನ್ನೇ ಕಸಿದುಕೊಂಡಿದೆ.
ಕೊಡಗಿನ ಭಾಗಮಂಡಲದಲ್ಲಿ ಪ್ರಧಾನಿ ಮೋದಿ ಕನಸಿನ ಯೋಜನೆ ಜಲಜೀವನ್ ಮಿಷನ್ ಯೋಜನೆಯಡಿ ಕೊಲ್ಲಿ ನೀರನ್ನು ಸಂಗ್ರಹಿಸುವ ಟ್ಯಾಂಕ್ ವೊಂದನ್ನು ನಿರ್ಮಿಸಲಾಗಿತ್ತು. ಈ ಮೂಲಕ ಭಾಗಮಂಡಲದ ಜನರಿಗೆ ನೀರು ತಲುಪಿಸುವಂತಹ ಕೆಲಸವಾಗುತ್ತಿತ್ತು. ಸುಮಾರು ೨೮೦ ಕುಟುಂಬಕ್ಕೆ ನೀರು ಸಂಪರ್ಕಿಸಲಾಗುತ್ತಿತ್ತು. ಆದರೆ ಅರಣ್ಯ ಇಲಾಖೆ ಈ ನೀರು ನಮ್ಮ ಪ್ರದೇಶಕ್ಕೆ ಸೇರಿದ್ದಾಗಿದ್ದು ಇದರ ನೀರನ್ನು ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದೆ. ಮಾತ್ರವಲ್ಲ ಅಲ್ಲಿ ಅಳವಡಿಸಲಾಗಿದ್ದ ಪಂಪ್ ಅನ್ನು ಅವರು ತೆಗೆದುಕೊಂಡು ಹೋಗಿದ್ದು ವಿದ್ಯುತ್ ಸಂಪರ್ಕವನ್ನು ಕಟ್ ಮಾಡಲಾಗಿದೆ. ಇದರಿಂದ ಭಾಗಮಂಡಲದ ಜನರಿಗೆ ತಲುಪುತ್ತಿದ್ದ ನೀರಿನ ಸಂಪರ್ಕ ಬಂದ್ ಆಗಿದೆ.
ಅರಣ್ಯ ಇಲಾಖೆ ನಡೆಯನ್ನು ಇದೀಗ ಸ್ಥಳೀಯರು ಟೀಕಿಸಿದ್ದಾರೆ. ವರ್ಷಂ ಪ್ರತಿ ಬೇಸಿಗೆಯಲ್ಲಿ ಭಾಗಮಂಡಲಕ್ಕೆ ನೀರು ಕಡಿಮೆಯಾದಾಗ ಅಲ್ಲಿನ ಜನ ಪರದಾಡುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಬೆಟ್ಟಗಳ ನಡುವೆ ಇರುವ ಕೊಲ್ಲಿ ನೀರು ಸದಾ ಚಿಮ್ಮುತ್ತಿರುತ್ತದೆ. ಅಲ್ಲಿಂದ ಭಾಗಮಂಡಲಕ್ಕೆ ನೀರು ತರಲು ನಿರ್ಧರಿಸಲಾಗಿ ಜಲಜೀವನ್ ಮಿಷನ್ ಯೋಜನೆಯಡಿ ಭಾಗಮಂಡಲಕ್ಕೆ ನೀರು ಉಣಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.