ನ್ಯೂಸ್ ನಾಟೌಟ್: ಯುರೋಪಿಯನ್ನ ಈ ದೇಶವನ್ನು ಎಲ್ಲರೂ ಇಷ್ಟ ಪಡುತ್ತಾರೆ.ಏಕೆಂದರೆ ತನ್ನ ಸೌಂದರ್ಯಕ್ಕಾಗಿ ದೇಶದಾದ್ಯಂತ ಇದು ಹೆಸರುವಾಸಿಯಾಗಿದೆ. ಆದರೆ ಈ ನಗರದಲ್ಲಿ ಬೆಕ್ಕುಗಳನ್ನು ಸಾಕಲು ಮತ್ತು ಜನರನ್ನು ಹೂಳಲು ನಿಷೇಧಿಸಲಾಗಿದೆ. ಮಾತ್ರವಲ್ಲ ಮಕ್ಕಲಿಗೆ ಜನ್ಮ ನೀಡುವುದನ್ನು ಕೂಡ ನಿಷೇಧ ಮಾಡಲಾಗಿದೆ. ಅರೆ! ಇದೇನಿದು?ಇದಕ್ಕೇ ಕಾರಣವೇನಿರಬಹುದು ಎಂಬುದನ್ನು ತಿಳಿಯೋಣ ಬನ್ನಿ..
ಯುರೋಪಿಯನ್ನ ನಾರ್ವೆಯಂತು ಸೌಂದರ್ಯವನ್ನು ಹೊದ್ದು ಕೊಂಡಿರುವ ನಗರವೆಂದೇ ಹೇಳಬಹುದು .ಸ್ವಾಲ್ಬಾರ್ಡ್ ದ್ವೀಪದ ಲಾಂಗ್ಇಯರ್ಬೈನ್ ನಗರದ ಜನರು ಪ್ರಕೃತಿಯ ನಿಯಮಗಳನ್ನು ಅನುಸರಿಸುವುದರೊಂದಿಗೆ ಈ ಸ್ಥಳದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.ಇದಲ್ಲದೇ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ವಿಶಿಷ್ಟ ನಿಯಮಗಳನ್ನು ಪಾಲಿಸಬೇಕು.
ಉದಾಹರಣೆಗೆ, ಈ ನಗರದಲ್ಲಿ ಬೆಕ್ಕುಗಳನ್ನು ಸಾಕಲು ಮತ್ತು ಸತ್ತ ಜನರನ್ನು ಹೂಳಲು ನಿಷೇಧಿಸಲಾಗಿದೆ. ಲಾಂಗ್ಇಯರ್ಬೈನ್ ಪ್ರಪಂಚದಲ್ಲೇ ಅತ್ಯಂತ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ನೈಸರ್ಗಿಕ ಪ್ರದೇಶಗಳಲ್ಲಿ ಒಂದಾಗಿದೆ. ಐಸ್ ಗುಹೆಗಳು, ಹಿಮನದಿಗಳು, ಉತ್ತರದ ದೀಪಗಳು ಮತ್ತು ವನ್ಯಜೀವಿಗಳನ್ನು ನೋಡಲು ಪ್ರತಿ ವರ್ಷ ಪ್ರಪಂಚದಾದ್ಯಂತದ ಸಾವಿರಾರು ಪ್ರವಾಸಿಗರು ಲಾಂಗ್ಇಯರ್ಬೈನ್ಗೆ ಬರುತ್ತಾರೆ.ಪಕ್ಷಿಗಳು ಸೇರಿದಂತೆ ಅನೇಕ ವನ್ಯಜೀವಿ ಪ್ರಭೇದಗಳಿಗೆ ಬೆಕ್ಕುಗಳನ್ನು ನೋಡಿದರೆ ಹೆದರಿಕೆ ಎಂದು ಈ ನಗರದ ಜನರು ಹೇಳುತ್ತಾರೆ. ಹೀಗಾಗಿ 1990ರಿಂದ ಇಲ್ಲಿ ಬೆಕ್ಕು ಸಾಕುವುದನ್ನು ಇಲ್ಲಿ ನಿಷೇಧಿಸಲಾಗಿದೆ. ಅಲ್ಲದೇ ಪ್ರವಾಸಿಗರು ಕೂಡ ತನ್ನ ಬೆಕ್ಕನ್ನು ಇಲ್ಲಿಗೆ ಕರೆದೊಯ್ಯಲು ಸಾಧ್ಯವಿಲ್ಲ.
ಇನ್ನು ಸ್ವಾಲ್ಬಾರ್ಡ್ ದ್ವೀಪದಲ್ಲಿ ಉಸಿರು ಚೆಲ್ಲಿದ ದೇಹವನ್ನು ಹೂಳುವುದು ನಿಷೇಧಿಸಲಾಗಿದೆ, ಏಕೆಂದರೆ ದೇಹಗಳು ಮಂಜುಗಡ್ಡೆಯಲ್ಲಿ ಕೊಳೆಯುವುದಿಲ್ಲ. 1918 ರಲ್ಲಿ ಸ್ಪ್ಯಾನಿಷ್ ಫ್ಲೂ ಸಮಯದಲ್ಲಿ ಸಮಾಧಿ ಮಾಡಿದ ದೇಹಗಳು ಸಹ ಸಮಾಧಿಯಾಗಿರಲಿಲ್ಲ. ಇದರಿಂದಾಗಿ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಕೂಡ ಬೇರೆಡೆಗೆ ಕಳುಹಿಸಲಾಗುತಿತ್ತು ಎನ್ನಲಾಗುತ್ತದೆ.
ಅಲ್ಲದೇ ಈ ದೇಶದಲ್ಲಿ ಮಕ್ಕಳಿಗೆ ಜನ್ಮ ನೀಡುವುದಕ್ಕೂ ನಿರ್ಬಂಧವಿದೆ ಎನ್ನಲಾಗುತ್ತದೆ. ವಾಸ್ತವವಾಗಿ, ಗರ್ಭಿಣಿಯರು ತಮ್ಮ ಹೆರಿಗೆಯ ದಿನಾಂಕದ ಮೊದಲು ಸ್ವಾಲ್ಬಾರ್ಡ್ ದ್ವೀಪವನ್ನು ಬಿಟ್ಟು ನಾರ್ವೆಯ ಆಸ್ಪತ್ರೆಗೆ ಕಳುಹಿಸುತ್ತಾರೆ, ಇದರಿಂದ ಅವರು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ.