ನ್ಯೂಸ್ ನಾಟೌಟ್ : ಮದುವೆ ಅನ್ನೋದು ಏಳೇಳು ಜನುಮಗಳ ಸಂಬಂಧ ಎಂದು ಕರಿತಾರೆ.ಗಂಡು – ಹೆಣ್ಣಿನ ನಡುವೆ ಬೆಳೆಯುವ ಪ್ರೀತಿಯ ಬಾಂಧವ್ಯಕ್ಕೆ ಬೆಲೆ ಕಟ್ಟಲಸಾಧ್ಯ.ಕಷ್ಟವಿರಲಿ,ಸಂತೋಷವಿರಲಿ ಇಬ್ಬರು ಹಾಲು-ಜೇನಿನಂತೆ ಸಮಾನವಾಗಿ ಮುನ್ನಡೆಯುವುದೇ ಜೀವನವಾಗಿರುತ್ತೆ.ಎಷ್ಟೋ ಮಂದಿ ಇಂದಿಗೂ ಆದರ್ಶ ದಂಪತಿಗಳಾಗಿ ಬಾಳುತ್ತಾ ಸಮಾಜಕ್ಕೆ ಮಾದರಿಯಾಗಿರ್ತಾರೆ.ಆದರೆ ಇಲ್ಲೊಬ್ಬ ಮದುಮಗ ಮದುವೆಯಾಗಿದ್ದೇ ತಡ ಈತನ ಆರ್ಭಟದ ಚಟುವಟಿಕೆಗೆ ಹಲವು ಕನಸು ಹೊತ್ತು ಮದುವೆಯಾದಾಕೆ ಶಾಶ್ವತ ನಿದ್ದೆಗೆ ಜಾರಿದ್ದಾಳೆ. .!
ತಾನು ಕನಸು ಕಾಣುತ್ತಿದ್ದ ಹುಡುಗ ಕಡೆಗೂ ಸಿಕ್ಕೆ ಬಿಟ್ಟ ಎಂದು ಖುಷಿಯಲ್ಲಿ ಮದುವೆಯಾದಳು ಹುಡುಗಿ.ಆದರೆ ಆತ ಈಕೆಯನ್ನು ಅದೇನೆಂದು ತಿಳ್ಕೊಂಡ್ನೋ ಏನೋ..ಮೊದಲ ರಾತ್ರಿ, ಪತಿ ಮಹಾಶಯ ವಯಾಗ್ರ ಮಾತ್ರೆ ಬಳಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾರದ ಲೋಕಕ್ಕೆ ತೆರಳಿದ್ದಾಳೆ. ವಿವೇಚನೆಯಿಲ್ಲದೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ ಯುವಕ ಆಕೆಯನ್ನ ಮುಗಿಸಿಯೇ ಬಿಟ್ಟಿದ್ದಾನೆ. ಹೆಂಡತಿಯೆಂದರೆ ಕೇವಲ ಒಂದು ದಿನಕ್ಕೆ ಸೀಮಿತವಾಗಿದ್ದಾಳೆ ಎಂದು ತಿಳಿದ ಪಾಪಿ ಗಂಡ 3 ದಿನಗಳ ಕಾಲ ನರಳಾಡಿ, ಸೋಂಕಿನಿಂದ ಬಳಲಿ ಸಂತ್ರಸ್ತೆ ಕೊನೆಗೂ ಕೊನೆಯುಸಿರೆಳೆದಿದ್ದಾಳೆ. ಉತ್ತರ ಪ್ರದೇಶದ ಹಮೀರ್ಪುರದಲ್ಲಿ ಈ ಘಟನೆ ನಡೆದಿದೆ.
ಹಮೀರ್ಪುರದ ಎಂಜಿನಿಯರ್ ಫೆಬ್ರವರಿ 3 ರಂದು ವಿವಾಹವಾಗ್ತಾರೆ. ಫಸ್ಟ್ ನೈಟ್ ಗಾಗಿ ವರ ವಯಾಗ್ರ ಮಾತ್ರೆ ತೆಗೆದುಕೊಂಡಿದ್ದ. ಇದರಿಂದಾಗಿ ಆಕೆಯ ಖಾಸಗಿ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ನಂತರ ಅವಳ ಆರೋಗ್ಯ ತೀವ್ರವಾಗಿ ಹದಗೆಟ್ಟಿತು.ತಕ್ಷಣ ಕಾನ್ಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂಗೆ ಸೇರಿಸಲಾಗಿತ್ತು. ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದರೂ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ನವ ವಧುವನ್ನು ಫೆಬ್ರವರಿ 7 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ವಿಫಲವಾದ ಕಾರಣ ಅವರು ಫೆಬ್ರವರಿ 10 ರ ಶನಿವಾರದಂದು ಬಾರದ ಲೋಕಕ್ಕೆ ತೆರಳಿರೋದನ್ನು ದೃಢಪಡಿಸಿದ್ದಾರೆ.ಸಂತ್ರಸ್ತೆಯ ಸ್ಥಿತಿ ಮೂರ್ನಾಲ್ಕು ಮಂದಿ ಬಲತ್ಕಾರ ಮಾಡಿದಷ್ಟು ಕೆಟ್ಟದಾಗಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.