ನ್ಯೂಸ್ ನಾಟೌಟ್ : ಅಹ್ಮದೀಯ (Ahmadiyya) ತತ್ವ ಪ್ರಚಾರದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಮುಸ್ಲಿಮ್ ಗುಂಪುಗಳ ನಡುವೆ ಕಿತ್ತಾಟ ನಡೆದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.
ದೇವತಗಲ್ ಗ್ರಾಮದಲ್ಲಿ ವಿಜಯನಗರ ಜಿಲ್ಲೆಯಿಂದ ಬಂದಿದ್ದ ಮೌಲ್ವಿಗಳು ಅಹ್ಮದೀಯ ತತ್ವದ ಬಗ್ಗೆ ಪ್ರಚಾರ ಮಾಡಿದ್ದಾರೆ. ಅಹ್ಮದಿ ಮಸೀದಿಯಲ್ಲಿ ಮುಸ್ಲಿಮರಿಗೆ ಧರ್ಮದ ಆಚರಣೆ ಬಗ್ಗೆ ಪ್ರವಚನ ನೀಡಿದ್ದಾರೆ.
ಪ್ರವಚನದಿಂದ ಆಕ್ರೋಶಗೊಂಡ ಮುಸ್ಲಿಂ ಧರ್ಮದ ಉಳಿದ ಪಂಗಡದ ಮುಖಂಡರು ಅಹ್ಮದೀಯ ಪಂಗಡ ತತ್ವ ಪ್ರಚಾರ ನಡೆಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನೀವು ಮುಸ್ಲಿಮರೇ ಅಲ್ಲ ನಿಮ್ಮ ತತ್ವ ಪ್ರಚಾರ ಮಾಡಬೇಡಿ ಎಂದು ಗಲಾಟೆ ಮಾಡಿದ್ದಾರೆ.
ಘಟನೆಯಲ್ಲಿ ಸಾದತ್ ಅಹಮದ್, ಸೈಯದ್ ಪಹೀಮ್, ಖಾಜಿ ಮೊಹಮದ್ ರಫಿ ಸೇರಿ ಆರು ಜನರ ಮೇಲೆ ಹ* ಲ್ಲೆ ಮಾಡಿ ಜೀವ ಬೆದ *ರಿಕೆ ಹಾಕಲಾಗಿದೆ ಎಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.