ನ್ಯೂಸ್ ನಾಟೌಟ್ :ಕಳೆದ ಐದು ವರ್ಷಗಳ ಹಿಂದಿನ ‘ಫೆ.೧೪’ ದಿನವನ್ನು ಯಾರು ಮರೆಯುವಂತಿಲ್ಲ.ಇನ್ನೇನೂ ಪ್ರೇಮಿಗಳ ದಿನವೆಂದು ಸ್ವಾರಸ್ಯಕರ ಸುದ್ದಿಗಳನ್ನು ಓದಬೇಕಾದ ನಾವು ಬೆಳ್ಳಂಬೆಳಗ್ಗೆ ಓದಿದ್ದು ಪುಲ್ವಾಮಾ ದಾಳಿಯ ವರದಿಯನ್ನು.ಈ ಘಟನೆ ಬಗ್ಗೆ ಕೇಳಿದಾಗ ದೇಶದ ಜನರಿಗೆ ಹೊಟ್ಟೆ ಚುರ್ರೆನ್ನತೊಡಗಿತು.ಇಡೀ ದೇಶವೇ ಮರುಕ ವ್ಯಕ್ತ ಪಡಿಸಿತು.ಅಂದಿನಿಂದ ಫೆ.೧೪ ಭಾರತದ ಪಾಲಿಗೆ ಕರಾಳ ದಿನವಾಗಿಯೇ ಹೋಯ್ತು..
ಇದೀಗ ಈ ದಿನ ಪುಲ್ವಾಮಾ ಜಿಲ್ಲೆಯ ಅವಂತಿ ಪಾರದಲ್ಲಿ ಆತ್ಮಾಹುತಿ ದಾಳಿ ಕೋರನ ಕಾರ್ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ 40 ಜನ ಸಿಆರ್ ಪಿ ಎಫ್ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ನಗರ ಪಂಚಾಯತ್ ಆವರಣದಲ್ಲಿ ನಿರ್ಮಾಣಗೊಂಡಿರುವ ಯುದ್ಧ ಸ್ಮಾರಕದೆದುರು ನಡೆಯಿತು.
ಈ ವೇಳೆ ನಗರ ಪಂಚಾಯಿತ್ನ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಪುಲ್ವಾಮಾ ಹತ್ಯಾಕಾಂಡದ ಘಟನೆಗಳನ್ನು ನೆನಪಿಸಿಕೊಂಡು ಭಯೋತ್ಪಾದನೆಯನ್ನು ಮಟ್ಟ ಹಾಕಲು ನಾವೆಲ್ಲರೂ ಒಂದಾಗಬೇಕೆಂದು ಕರೆ ನೀಡಿದರು. ನಗರ ಪಂಚಾಯತ್ ಸದಸ್ಯರುಗಳಾದ ಎಂ.ವೆಂಕಪ್ಪಗೌಡ, ಕೆ.ಸುಧಾಕರ್, ಶರೀಫ್ ಕಂಠಿ, ಶೀಲಾ ಅರುಣ್ ಕುರುಂಜಿ , ಶಶಿಕಲಾ ಎನ್, ಪೂಜಿತ ಕೆಯು, ಶಿಲ್ಪಾಸುದೇವ್, ನಗರ ಪಂಚಾಯತ್ ಎಲ್ಲಾ ಸಿಬ್ಬಂದಿಗಳು, ಸಾರ್ವಜನಿಕರಾದ ಎ ಎಂ ಭಟ್ , ಸುಭೋದ ಶೆಟ್ಟಿ ,ಕುಸುಮಾಧರ ಎಟಿ, ನ್ಯಾಯವಾದಿಗಳಾದ ಜಗದೀಶ್ ಡಿಪಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಎಲ್ಲರೂ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.