ನ್ಯೂಸ್ ನಾಟೌಟ್: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲ ಬ್ಯುಸಿಯಾಗಿರುವ ಅವರು ಸ್ವಲ್ಪ ಬಿಡುವಿನ ವೇಳೆ ಸಾಮಾಜಿಕ ಜಾಲತಾಣಗಳಲ್ಲೂ ಅಭಿಮಾನಗಳ ಜೊತೆ ಸಂವಹನ ನಡೆಸುವುದನ್ನು ಕೂಡ ರೂಢಿಸಿಕೊಂಡಿದ್ದಾರೆ. ಇದೀಗ ಅವರು ಫೆ14 ಪ್ರೇಮಿಗಳ ದಿನದಂದು ಅವರು ಜಾಲತಾಣದಲ್ಲಿ ಫೋಟೋ ಪ್ರಕಟಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಹೊಸ ಫೋಟೋ ಹಂಚಿಕೊಂಡಿರುವ ಅವರು ಹೊಸ ವರ್ಷದ ಪ್ಲ್ಯಾನ್ (Plan)ಏನು ಎನ್ನುವುದನ್ನು ಕಾಮೆಂಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ಫೆ.14 ಪ್ರೇಮಿಗಳ ದಿನಾಚರಣೆ. ಪ್ರೇಮಿಗಳಿಗೆ ಬಹಳ ವಿಶೇಷವಾದ ದಿನ. ಈಗಾಗ್ಲೆ ಪ್ರೇಮಿಗಳು ಬಹಳ ವಿಶೇಷ ರೀತಿಯಲ್ಲಿ ಆಚರಿಸಲು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಹಾಗಾಗಿ ಈ ವಿಷಯದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿಕೆ ಕೂಡ ಇದೀಗ ವೈರಲ್ ಆಗಿದೆ.
ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದರು. ಈ ಸಿನಿಮಾದಿಂದ ಅವರ ಅದೃಷ್ಟವೇ ಬದಲಾಯಿತು. ಆದರೆ ರಕ್ಷಿತ್ ಜೊತೆಗಿನ ಅವರ ನಿಶ್ವಿತಾರ್ಥದ ಬಳಿಕ ಅವರಿಬ್ಬರ ಸಂಬಂಧ ಮುರಿದು ಬಿತ್ತು. ಆ ಬಳಿಕ ಅವರಿಬ್ಬರು ದೂರವಾದರು. ಬಳಿಕ ಆಕೆ ಟಾಲಿವುಡ್ ನಲ್ಲಿ ವಿಜಯ ದೇವರಕೊಂಡ ಜೊತೆ ನಟಿಸಿ ಮತ್ತೆ ಜನಪ್ರಿಯತೆಗೆ ಬಂದರು. ಇದೀಗ ಟಾಲಿವುಡ್ ನ ಜನಪ್ರಿಯ ನಟಿಯಾಗಿ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದಾರೆ. ಪ್ರಸಿದ್ದಿಯ ಅಮಲಲ್ಲಿರುವ ನಟಿ ತಾನು ಬಂದ ದಾರಿಯನ್ನೇ ಮರೆಯುವುದರ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಕೆಂಗಣ್ಣಿಗೆ ಹಲವಾರು ಬಾರಿ ಗುರಿಯಾಗಿದ್ದರು. ಯದ್ವಾ ತದ್ವಾ ಟ್ರೋಲ್ ಗೆ ಒಳಗಾಗಿದ್ದರು.