ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವುದು ಇಂದಿನ ಯುವಕ -ಯುವತಿಯರಿಗೆ ಅಷ್ಟೇ ಏಕೆ ಅಜ್ಜ-ಅಜ್ಜಿಯರಿಗೂ ಫ್ಯಾಶನ್ ಆಗಿದೆ. ಹಲವಾರು ಜನ ಜಾಲತಾಣದಲ್ಲಿ ರೀಲ್ಸ್ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿರುತ್ತಾರೆ.
ಇದೀಗ ಇದೇ ರೀಲ್ಸ್ ಅನ್ನು ಉಪಯೋಗಿಸಿಕೊಂಡು ಸಿದ್ದು ಸರ್ಕಾದ ಮೆಗಾ ಪ್ಲಾನ್ ಮಾಡಿಕೊಂಡಿದೆ. ಕರ್ನಾಟಕ ಸರ್ಕಾರ ಕೂಡ ರೀಲ್ಸ್ ಮಾಡಿ ಬಹುಮಾನ ಗೆಲ್ಲುವ ಅವಕಾಶವನ್ನು ತೆರೆದಿಟ್ಟಿದೆ. ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ರೀಲ್ಸ್ ಮಾಡಿ ನಗದು ಗೆಲ್ಲುವ ಅವಕಾಶ ಇದಾಗಿದೆ. ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ, ದ್ವಿತೀಯ ಬಹುಮಾನವಾಗಿ 25 ಸಾವಿರ ರೂಪಾಯಿ, ತೃತೀಯ ಬಹುಮಾನವಾಗಿ 15 ಸಾವಿರ ರೂಪಾಯಿ ಗೆಲ್ಲುವ ಅವಕಾಶ ನೀಡಿದೆ. ರೀಲ್ಸ್ ಮಾಡಲು ವಿಷಯಗಳನ್ನು ನೀಡಿದೆ. ಮೂಲಭೂತ ಕರ್ತವ್ಯಗಳು, ಸಂವಿಧಾನದ ಮಹತ್ವ, ಮೂಲಭೂತ ಹಕ್ಕುಗಳು, ಪೀಠೀಕೆಯ ವೈಶಿಷ್ಟ್ಯ ಅಥವಾ ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾದರೂ ಅಂಶಗಳ ಮೇಲೆ ರೀಲ್ಸ್ ಮಾಡಿದರೆ ಮಾತ್ರ ಬಹುಮಾನ ಗೆಲ್ಲಬಹುದಾಗಿದೆ. ರೀಲ್ಸ್ ಮಾಡಿದ ಬಳಿಕ ವಿಡಿಯೋವನ್ನು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ [email protected]ಗೆ ಮೇಲ್ ಮಾಡಿ ನೋಂದಾಯಿಸಿಕೊಳ್ಳಬೇಕಿದೆ. ಫೆಬ್ರವರಿ 20ರ ಸಂಜೆ 5 ಗಂಟೆಗಳ ತನಕ ವಿಡಿಯೋ ಕಳುಹಿಸಬಹುದಾಗಿದೆ ಎಂದು ತಿಳಿಸಲಾಗಿದೆ.