ನ್ಯೂಸ್ ನಾಟೌಟ್ : ಕ್ಯೂಟೆಸ್ಟ್ ಕಪಲ್ಸ್ ಎಂದೇ ಹೆಸರಾಗಿರುವ ವಿರೂಷ್ಕಾ ಆಗಾಗ ಸುದ್ದಿಯಲ್ಲಿರುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರೂ ಎಲ್ಲೂ ಕಾಣಿಸಿಕೊಳ್ತಿಲ್ಲ ಯಾಕೆ ಎನ್ನುವ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಒಂದೆಡೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಗೆ ಅಲಭ್ಯರಾಗಿದ್ದೇಕೆ? ಕ್ರಿಕೆಟ್ ಪ್ರೇಮಿಗಳನ್ನು ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆಯಾದ್ರೆ , ಮತ್ತೊಂದೆಡೆ ವಿರಾಟ್ ಪತ್ನಿ ಅನುಷ್ಕಾ ಗರ್ಭಿಣಿಯಾಗಿದ್ದಾರೆ ಅನ್ನೋ ವಿಚಾರ ಚರ್ಚೆಯಲ್ಲಿತ್ತು.ಈ ವಿಚಾರ ಸುಳ್ಳು ಎನ್ನುವುದು ಕೂಡ ಬಳಿಕ ಗೊತ್ತಾಯ್ತು?ಅವರು ಕೂಡ ಸದ್ಯ ಎಲ್ಲೂ ಕಾಣಿಸಿಕೊಂಡಿಲ್ಲ ಅನ್ನೋದರ ಬಗ್ಗೆ ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾದ್ರೆ ಕಿಂಗ್ ಕೊಹ್ಲಿ ಇಂಗ್ಲೆಂಡ್ ಸರಣಿ ತಪ್ಪಿಸಿಕೊಳ್ಳಲು ಅಸಲಿ ಕಾರಣವೇನು?
ಸದ್ಯ ವಿರಾಟ್ ಫ್ಯಾನ್ಸ್ಗೆ ಇದು ಕೇಳೋಕೆ ಸ್ವಲ್ಪ ಬೇಸರ ಅನ್ನಿಸಿದ್ರೂ ಈ ತೆರನಾದ ಸುದ್ದಿ ಇದೀಗ ಹೊರಬಿದ್ದಿದೆ. ವಿರಾಟ್ ಕೊಹ್ಲಿಯ ಮಡದಿ ಅನುಷ್ಕಾ ಶರ್ಮಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ವಿರಾಟ್ ಇಂಗ್ಲೆಂಡ್ ಸರಣಿಗೆ ಗುಡ್ಬೈ ಹೇಳಿ, ಪತ್ನಿಯೊಂದಿಗೆ ಇದ್ದಾರೆ ಎಂಬ ಸುದ್ದಿ ಸದ್ಯ ಬಿರುಗಾಳಿಯಂತೆ ಹಬ್ಬಿದೆ. ಅನುಷ್ಕಾ ಯಾವ ತರಹದ ಆರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದು ಮಾತ್ರ ತಿಳಿದು ಬಂದಿಲ್ಲ.
ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗ್ತಿದ್ದು, ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ವಿದೇಶದಲ್ಲಿ ಇದ್ದಾರೆ ಎನ್ನಲಾಗ್ತಿದೆ. ಅಲ್ಲಿಯೇ ನುರಿತ ವೈದ್ಯರನ್ನ ಸಂಪರ್ಕಿಸಿದ್ದು, ಪತ್ನಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂಬ ಮಾಹಿತಿಯಿದೆ. ವಿರಾಟ್ ಕೊಹ್ಲಿ ಜೊತೆಗಿದ್ದು ಎಲ್ಲವನ್ನೂ ನೋಡಿಕೊಳ್ತಿದ್ದಾರೆ ಎನ್ನಲಾಗ್ತಿದೆ. ಆದ್ರೆ ಸಮಸ್ಯೆ ಏನು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.
ಈ ಹಿಂದೆಯೂ ಕೊಹ್ಲಿ ಕ್ರಿಕೆಟ್ನಿಂದ ಬ್ರೇಕ್ ಪಡೆದು ಫ್ಯಾಮಿಲಿಗೆ ಸಮಯ ಮೀಸಲಿಟ್ಟಿದ್ರು. ಅಟ್ಲೀಸ್ಟ್ ಸೋಷಿಯಲ್ ಮೀಡಿಯಾದಲ್ಲಾದ್ರೂ ಆ್ಯಕ್ಟೀವ್ ಇದ್ರು. ಏನಿಲ್ಲಾ ಅಂದ್ರೂ ಕಮರ್ಷಿಯಲ್ ಪೋಸ್ಟ್ಗಳನ್ನಾದ್ರೂ ಪೋಸ್ಟ್ ಮಾಡ್ತಿದ್ರು. ಆದ್ರೀಗ, ಕೊಹ್ಲಿ ಎಲ್ಲದರಿಂದಲೂ ದೂರ ಸರಿದಿದ್ದಾರೆ. ಇದ್ರ ನಡುವೆ ಇದೀಗ ಪತ್ನಿಗೆ ಅನಾರೋಗ್ಯ ಅನ್ನೋ ಸುದ್ದಿ ಹಬ್ಬಿದೆ. ಇದು ವಿರಾಟ್ ಅಭಿಮಾನಿ ಬಳಗದಲ್ಲಿ ಬಹಳ ಆತಂಕ ಮೂಡಿಸಿದೆ.
ವಿರಾಟ್ ಪತ್ನಿ ಅನಾರೋಗ್ಯ ಸುದ್ದಿ ಅವರ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.ಈ ಸುದ್ದಿ ಸುಳ್ಳಾಗಲಿ ಅನ್ನೋದು ಫ್ಯಾನ್ಸ್ ಆಶಯ. ಒಂದು ವೇಳೆ ನಿಜವೇ ಆಗಿದ್ರೂ, ಅನುಷ್ಕಾ ಬೇಗನೆ ಚೇತರಿಸಿಕೊಳ್ಳಲಿ. ಕೊಹ್ಲಿ ಆದಷ್ಟು ಬೇಗ ಮೈದಾನಕ್ಕೆ ಮರಳಲಿ ಅನ್ನೋದು ಕೊಟ್ಯಂತರ ಅಭಿಮಾನಿಗಳ ಪ್ರಾರ್ಥನೆಯಾಗಿದೆ.