ನ್ಯೂಸ್ ನಾಟೌಟ್: ಶ್ರೀ ಆದಿಬ್ರಹ್ಮ ಮೊಗೇರ್ಕಳ 43ನೇ ವರ್ಷದ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜನ ನೇಮೋತ್ಸವ ಮಾರ್ಚ್ 9 ಶನಿವಾರ ಮತ್ತು 10 ಭಾನುವಾರದಂದು ಕ್ರಮವಾಗಿ ನಡೆಯಲಿದೆ.
ಮಾರ್ಚ್ 9 ಶನಿವಾರ ಬೆಳಗ್ಗೆ 7 ಗಂಟೆಗೆ ಸ್ಥಳ ಶುದ್ಧೀಕರಣ, ಬೆಳಗ್ಗೆ ಗಂಟೆ 8ರಿಂದ ಐದು ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 2ರಿಂದ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ ಗಂಟೆ 8.30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 9ರಿಂದ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ ಗಂಟೆ 12ಕ್ಕೆ ಮಾಯದ ದೇವಿ ತನ್ನಿಮಾನಿ ಗರಡಿ ಇಳಿಯುವುದು, ರಾತ್ರಿ ಗಂಟೆ 1.30ಕ್ಕೆ ಬಟ್ಟಲು ಕಾಣಿಕೆ ಹೂವಿನ ಹಾರ ಅರ್ಪಿಸುವುದು, ರಾತ್ರಿ ಗಂಟೆ 2.30ರಿಂದ ಮೊಗೇರ ಪೂಜಾರಿಗಳ ದರ್ಶನ ಸವಾರಿ, ರಾತ್ರಿ ಗಂಟೆ 3.30ರಿಂದ ಹರಿಕೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 10ರಂದು ಬೆಳಗ್ಗೆ ಗಂಟೆ 7ರಿಂದ ಶ್ರೀ ಸ್ವಾಮಿ ಕೊರಗಜ್ಜನ ನೇಮೋತ್ಸವ ನಡೆಯಲಿದೆ. ಅದಾದ ಬಳಿಕ ಪ್ರಸಾದ ವಿತರಣೆ ಹಾಗೂ ಹಣ್ಣು ಕಾಯಿ ಪ್ರಸಾದ ವಿತರಣೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಕ್ಕೆ ದೈವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರರಾದ ಜಿ.ಕೆ.ಚಂದ್ರಶೇಖರ್, ಸಂಸ್ಥಾಪಕ ದೈವದ ಮಾನಿ ದಿವಂಗತ ಡಿಕೆಜಿ ದೊಡ್ಡಡ್ಕ, ಪ್ರೋತ್ಸಾಹರು ಸುಂದರ ಪೂಜಾರಿ ದೊಡ್ಡಡ್ಕ, ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಊರವರು ಎಲ್ಲರನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾರೆ.