ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಜಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ 2023-24ರ ಸಾಲಿನ ವಿವಿಧ ವಿಭಾಗದ ಪರೀಕ್ಷೆಗಳಲ್ಲಿ ಭರ್ಜರಿ ಸಾಧನೆ ಮೆರೆದಿದ್ದಾರೆ.
ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಪಿಸಿಯೋಥೆರೆಪಿ ವಿಭಾಗದಲ್ಲಿ ಸಾಮ್ ಶಾಜು ತಮರಚಲಿಲ್ ಅಂತಿಮ ವರ್ಷದ ಫಿಸಿಯೋಥೆರಪಿಯ ನ್ಯೂರೋಲಜಿ ಮತ್ತು ನ್ಯೂರೋಸರ್ಜರಿ ವಿಭಾಗದಲ್ಲಿ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಅಂತೆಯೇ 2023-24ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಪದವಿಯ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಒಟ್ಟು 5 ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡಿದ್ದಾರೆ. ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಡಾ. ಉಜ್ವಲ್ 1ನೇ ರ್ಯಾಂಕ್ ಪಡೆದು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಇದೇ ವಿಭಾಗದಲ್ಲಿ ಡಾ| ಸ್ನೇಹ ಎಸ್.ಎನ್. 5ನೇ ರ್ಯಾಂಕ್ ಪಡೆದುಕೊಂಡಿರುವುದು ವಿಶೇಷವಾಗಿದೆ. ವಿಕಿರಣ ಶಾಸ್ತ್ರ ವಿಭಾಗದಲ್ಲಿ ಡಾ. ವಿನುತ ಜಿ.ಎಂ. 10ನೇ ರ್ಯಾಂಕ್ ಪಡೆದುಕೊಂಡಿದ್ದರೆ, ಮಾನಸಿಕ ರೋಗ ಚಿಕಿತ್ಸಾ ವಿಭಾಗದಲ್ಲಿ ಡಾ. ಶಶಿಕಲಾ ಐ.ಎಂ. 2ನೇ ರ್ಯಾಂಕ್, ಡಾ. ಆರುಶಿ ಸಿಂಗ್ 4ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ.
ಇನ್ನು 2023-24ನೇ ಸಾಲಿನ ವೈದ್ಯಕೀಯ ಪದವಿಯ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳು ಒಟ್ಟು 6 ರ್ಯಾಂಕ್ಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಂಶು ಶೆಟ್ಟಿಯವರು ಪ್ರಥಮ ಎಂ.ಬಿ.ಬಿ.ಎಸ್.ನ ಅಂಗರಚನಾ ಶಾಸ್ತ್ರ ವಿಭಾಗದಲ್ಲಿ 7ನೇ ರ್ಯಾಂಕ್ ಹಾಗೂ ದ್ವಿತೀಯ ಎಂ.ಬಿ.ಬಿ.ಎಸ್.ನ ನ್ಯಾಯ ವೈದ್ಯ ಶಾಸ್ತ್ರ ವಿಭಾಗದಲ್ಲಿ 1ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ. ಗ್ರೀಷ್ಮಾ ಉಣ್ಣಿಕೃಷ್ಣನ್ ತೃತೀಯ ವೈದ್ಯಕೀಯ ಪದವಿಯಲ್ಲಿ 7ನೇ ರ್ಯಾಂಕ್ಗೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ತೃತೀಯ ವರ್ಷದ ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿ 9ನೇ ರ್ಯಾಂಕ್ ಹಾಗೂ ಅಂತಿಮ ವರ್ಷದ ಸ್ತ್ರಿ ರೋಗ ಮತ್ತು ಪ್ರಸೂತಿ ತಂತ್ರ ವಿಭಾಗದಲಿ 10ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ.
ನಿತ್ಯಬಾಲ ಈಶ್ವರ್ ಪ್ರಸಾದ್ ತೃತೀಯ ವೈದ್ಯಕೀಯ ಪದವಿಯಲ್ಲಿ 8ನೇ ರ್ಯಾಂಕ್ಗೆ ಪಡೆದಿದ್ದಾರೆ. ಅಲ್ಲದೇ ತೃತೀಯ ವರ್ಷದ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದಲ್ಲಿ 5ನೇ ರ್ಯಾಂಕ್ ಗೆ ಪಾತ್ರರಾಗಿದ್ದಾರೆ. ವಿಸ್ಮಯ ಕೆ. ತೃತೀಯ ವೈದ್ಯಕೀಯ ಪದವಿಯ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪೂಜ ದರ್ಶಿನಿ ಅಂತಿಮ ವೈದ್ಯಕೀಯ ಪದವಿಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದುಕೊಂಡರು. ಗುರುರಾಜ ಕೆ.ಎಂ. ಅಂತಿಮ ವೈದ್ಯಕೀಯ ಪದವಿಯ ಸ್ತ್ರೀರೋಗ ಮತ್ತು ಪ್ರಸೂತಿ ತಂತ್ರ ವಿಭಾಗದಲ್ಲಿ 10ನೇ ರ್ಯಾಂಕ್ ಪಡೆದರು. ಕಾಲೇಜಿನ ಆಡಳಿತಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.