ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2023-24 ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ನ ರ್ಯಾಂಕ್ ಪ್ರಕಟಿಸಿದ್ದಾರೆ. ಇದರಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಭರ್ಜರಿ 6 ರ್ಯಾಂಕ್ ಪಡೆದುಕೊಂಡಿದ್ದಾರೆ.
ಎಮರ್ಜೆನ್ಸಿ ಮೆಡಿಸಿನ್ ಮತ್ತು ಟ್ರಾಮ ಕೇರ್ ಟೆಕ್ನಾಲಜಿ ವಿಭಾಗದ ಅನ್ನೆಟ್ ಮರಿಯ ಥೊಮಸ್ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಮೆಡಿಕಲ್ ಇಮೆಜಿಂಗ್ ಟೆಕ್ನಾಲಜಿ ವಿಭಾಗದ ಆಸಿಫ್ ಆಲಿ ಪ್ರಥಮ ಬಿ.ಎಸ್ಸಿ.ಯಲ್ಲಿ 2ನೇ ರ್ಯಾಂಕ್, ದ್ವಿತೀಯ ಬಿ.ಎಸ್ಸಿಯಲ್ಲಿ 9ನೇ ರ್ಯಾಂಕ್, ತೃತೀಯ ಬಿ.ಎಸ್ಸಿಯಲ್ಲಿ 6ನೇ ರ್ಯಾಂಕ್ ಪಡೆದು ಮೆಡಿಕಲ್ ಇಮೆಜಿಂಗ್ ಟೆಕ್ನಾಲಜಿ ವಿಭಾಗದಲ್ಲಿ 2ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ. ಮೆಡಿಕಲ್ ಇಮೆಜಿಂಗ್ ಟೆಕ್ನಾಲಜಿ ವಿಭಾಗದ ಮುಬಶಿರ್ ದ್ವಿತೀಯ ಬಿ.ಎಸ್ಸಿ. ಇಮೆಜಿಂಗ್ ಟೆಕ್ನಾಲಜಿ ವಿಭಾಗದಲ್ಲಿ 7ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ. ಕಾಲೇಜಿನ ಆಡಳಿತಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.