ನ್ಯೂಸ್ ನಾಟೌಟ್ : ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಹೆಸರಿನಲ್ಲಿ ಆಸ್ಟ್ರೇಲಿಯಾದ ಸೆನೇಟರ್ (ಸಂಸದ) ವರುಣ್ ಘೋಷ್ (38) ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಭಗವದ್ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಆಸೀಸ್ ಸಂಸದ ಎಂಬ ಬಿರುದು ಪಡೆದಿದ್ದು, ಹೆಚ್ಚಿನ ಭಾರತಿಯರು ಸಂಸದನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಮಾಜಿ ಸಂಸದ ಪ್ಯಾಟ್ರಿಕ್ ಡಾಡ್ಸನ್ ತನ್ನ ಸ್ಥಾನದಿಂದ ನಿವೃತ್ತರಾಗಿದ್ದರು.
ಹೀಗಾಗಿ ತೆರವಾಗಿದ್ದ ಸೆನೇಟ್ ಸ್ಥಾನವನ್ನು ಲೇಬರ್ ಪಾರ್ಟಿಯ ಘೋಷ್ ತುಂಬಿದ್ದಾರೆ ಎನ್ನಲಾಗಿದೆ.