ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣದ ವಿಚಾರದಲ್ಲಿ ಚೀನಾದ ಈ ಯುವತಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ ಎಂದರೆ ತಪ್ಪಿಲ್ಲ. ಯಾಕೆಂದರೆ ಇವರು ಸೋಷಿಯಲ್ ಮೀಡಿಯಾ ಮೂಲಕ ಪ್ರತಿವಾರ ಬರೋಬ್ಬರಿ 120 ಕೋಟಿ ರೂ. ಗಳಿಸುತ್ತಾರೆ ಎಂದು ವರದಿ ತಿಳಿಸಿದೆ. ಚೀನಾದ ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ (Social media influencers) ಜೆಂಗ್ ಕ್ಸಿಯಾಂಗ್ ಕ್ಸಿಯಾಂಗ್ (Zheng Xiang Xiang) ಸೋಷಿಯಲ್ ಮೀಡಿಯಾ ಮೂಲಕ ಕೋಟಿ ಕೋಟಿ ಆದಾಯ ಗಳಿಸುತ್ತಿರುವವರು ಎನ್ನಲಾಗಿದೆ.
ಚೀನಾದಲ್ಲಿ ಉತ್ಪಾದನಾ ಕಂಪನಿಗಳ ಸಂಖ್ಯೆಯೇ ಹೆಚ್ಚು, ಈಕೆ ಅವರನ್ನೇ ಟಾರ್ಗೆಟ್ ಮಾಡಿತ್ತಾಳೆ ಎನ್ನಲಾಗಿದೆ. ಅವರು ಆನ್ಲೈನ್ ಮೂಲಕ ವಿವಿಧ ಉತ್ಪನ್ನಗಳ ಪ್ರಚಾರ ಕ್ರಾಂತಿಯನ್ನೇ ಉಂಟು ಮಾಡಿದ್ದು, ಆ ಮೂಲಕ ಅಪಾರ ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ. ಈಕೆ ಟಿಕ್ಟಾಕ್ ಆ್ಯಪ್ನ ಚೀನಾದ ಅವತರಿಣಿಕೆ ಡೌಯಿನ್ಲ್ಲಿ ಜೆಂಗ್ ಕ್ಸಿಯಾಂಗ್ 50 ಲಕ್ಷಕ್ಕಿಂತ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಉತ್ಪನ್ನಗಳನ್ನು ಪರಿಚಯಿಸುವ ವಿಧಾನ ಬಹು ಜನಪ್ರಿಯವಾಗಿದೆ.
ಬಹುತೇಕ ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ಗಳು ಪ್ರತಿ ಉತ್ಪನ್ನಗಳ ಗುಣಗಳನ್ನು ವಿವರಿಸುತ್ತಾರೆ. ಆದರೆ ಜೆಂಗ್ ಕ್ಸಿಯಾಂಗ್ ಹಾಗಲ್ಲ. ಅವರು ಯಾವುದೇ ಪ್ರೊಡಕ್ಟ್ ಅನ್ನು ಮೂರು ಸೆಕೆಂಡ್ಗಳ ಕಾಲ ತೋರಿಸುತ್ತಾರಷ್ಟೆ. ಆ ಬಗ್ಗೆ ವಿವರಣೆಯನ್ನೂ ನೀಡುವುದಿಲ್ಲ. ಕೇವಲ ಬೆಲೆಯನ್ನಷ್ಟೇ ಹೇಳುತ್ತಾರೆ. ಅವರ ಈ ವಿಶಿಷ್ಟ ರೀತಿಯೇ ಜನರನ್ನು ಆಕರ್ಷಿದೆ ಎಂದು ಹಲವರ ಅಭಿಪ್ರಾಯ.