ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಾಳೆ (ಫೆ.೧೦) ರಂದು “ಅನುಸಂಧಾನ-2024” ನಡೆಯಲಿದೆ. A seminar on Research Methodology and biostatistics ವಿಚಾರಗೋಷ್ಠಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷರಾಗಿರುವ ಡಾ | ಕೆ.ವಿ ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಉಪಾಧ್ಯಕ್ಷರಾಗಿರುವ ಶೋಭಾ ಚಿದಾನಂದ , ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಕಾರ್ಯದರ್ಶಿ ಡಾ | ಐಶ್ವರ್ಯ ಕೆ.ಸಿ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ | ಡಿ.ವಿ ಲೀಲಾಧರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರು ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರಿನ ಡಾ. ಎಲ್ .ಎನ್ ಶೆಣೈ, ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಬೆಂಗಳೂರು ಇದರ ಸಂಹಿತ-ಸಿದ್ಧಾಂತ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ಡಾ | ಆನಂದ ಕಟ್ಟಿ, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಇದರ ಅಗದ ತಂತ್ರ ವಿಭಾಗದ ಮೆಡಿಕಲ್ ಡೈರೆಕ್ಟರ್ ಮತ್ತು ಅಸೋಸಿಯೆಟ್ ಪ್ರೊಫೆಸರ್ ಡಾ| ಅಜಿತ್ ಕಾಮತ್ ಅವರು ಕ್ರಮವಾಗಿ ವಿವಿಧ ವಿಚಾರಗಳ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.