ನ್ಯೂಸ್ ನಾಟೌಟ್ : ಸುಳ್ಯ ನೂತನ ಸರ್ಕಲ್ ಇನ್ಸ್ಸ್ಪೆಕ್ಟರ್ ಆಗಿ ಸತ್ಯನಾರಾಯಣ.ಕೆ ಅವರನ್ನು ನೇಮಕಗೊಳಿಸಿರುವ ಹಿನ್ನಲೆಯಲ್ಲಿ ಇದೀಗ ಅವರು ಅಧಿಕಾರವನ್ನೂ ಸ್ವೀಕಾರ ಮಾಡಿದ್ದಾರೆ.ಇದೀಗ ಮಂಗಳೂರಿಗೆ ವರ್ಗಾವಣೆಗೊಂಡಿರುವ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿ ಹಾಗೂ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನೂತನ ವೃತ್ತ ನಿರೀಕ್ಷಕರನ್ನು ಸ್ವಾಗತಿಸಿದರು.
ಸತ್ಯನಾರಾಯಣ ಕೆ. ಅವರು ಈ ಹಿಂದೆ ಸುಳ್ಯಕ್ಕೆ ಚಿಕ್ಕಮಗಳೂರು ಆಲ್ದೂರು ವೃತ್ತದಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಚುನಾವಣಾ ಹಿನ್ನೆಲೆ ಸುಳ್ಯಕ್ಕೆ ವರ್ಗಾವಣೆಗೊಂಡಿದ್ದು, ಇದೀಗ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರು ಮೂಲತಃ ಶೃಂಗೇರಿಯವರಾಗಿದ್ದು, ಬೆಂಗಳೂರು, ಶ್ರೀರಾಂಪುರ,ಶಿಗ್ಗಾವಿ, ಚಿಕ್ಕಮಗಳೂರು, ಕಡೂರು, ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.ಮಾತ್ರವಲ್ಲ ತಮ್ಮ ಈ ಸೇವೆಯನ್ನು ಗುರುತಿಸಿ ಪದಕವನ್ನು ಸ್ವೀಕರಿಸಿದ್ದಾರೆ. 2018ರಲ್ಲಿ ರಾಷ್ಟ್ರಪತಿ ಪದಕ ಸೇರಿದಂತೆ 2019ರಲ್ಲಿ ಮುಖ್ಯಮಂತ್ರಿ ಪದಕವನ್ನು ಪಡೆದುಕೊಂಡ ಹೆಗ್ಗಳಿಕೆ ಇವರದು.