ನ್ಯೂಸ್ ನಾಟೌಟ್ : ಶ್ರೀಮಂತರು ಐಶಾರಾಮಿ ಬಂಗ್ಲೆಯಲ್ಲಿ ವಾಸ ಮಾಡ್ತಾರೆ.ಆದರೆ ಬಡವರು ಗುಡಿಸಲು ಅಥವಾ ಟೆಂಟ್ ಹಾಕ್ಕೊಂಡು ವಾಸ ಮಾಡ್ತಾರೆ.ಆದರೆ ಇಲ್ಲೊಂದು ಕುಟುಂಬವಿದೆ.ರೈಲ್ವೇ ಹಳಿ ಮೇಲೆಯೇ ಅಡುಗೆ,ಮಕ್ಕಳಿಗೆ ಪಾಠ ಅಂದ್ರೆ ನೀವು ನಂಬ್ತೀರಾ? ಹೌದು,ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಇಂತಹ ಒಂದು ಘಟನೆ ಬಗ್ಗೆ ವರದಿಯಾಗಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ.ಮುಂಬೈನ ಮಾಹೀಂ ರೈಲ್ವೆ ನಿಲ್ದಾಣದಲ್ಲಿನ ಹಳಿಗಳ ಮೇಲೆ ಜನರು ಅಡುಗೆ ತಯಾರಿಸುತ್ತಿರುವ ಹಾಗೂ ಕೆಲವರು ಹಳಿಯ ಮೇಲೆ ಕುಳಿತು ಓದುತ್ತಿರುವ, ಬಟ್ಟೆಗಳನ್ನು ಒಣಗಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ. ಸುರಕ್ಷತೆಯ ಪ್ರಶ್ನೆಯನ್ನು ಮೂಡಿಸಿದೆ.ಈ ದೃಶ್ಯವನ್ನು ನೋಡಿದಾಗ ಎಂಥವರು ಒಂದು ಕ್ಷಣ ಗಾಬರಿಯಾಗೋದಂತು ಗ್ಯಾರಂಟಿ.. ರೈಲ್ವೆ ಹಳಿಯ ಮೇಲೆಯೇ ಅಡುಗೆ ಬೇಯಿಸುತ್ತಿರುವ, ಬಟ್ಟೆ ಒಣಗಿಸಿರುವ ಹಾಗೂ ಜನರು, ಮಕ್ಕಳು ಗಿಜಿಗುಟ್ಟುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಈ ವಿಡಿಯೋವನ್ನು ಗಮನಿಸಿ ತಕ್ಷಣವೇ ರೈಲ್ವೆ ಇಲಾಖೆ ಸ್ಥಳಕ್ಕೆ ಭೇಟಿ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ. ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಒತ್ತಾಯಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಯೊಬ್ಬರು, ಮಾಹೀಂ ರೈಲ್ವೆ ಹಳಿಗಳನ್ನು ಮುಖ್ಯವಾಗಿ ರಾತ್ರಿ ವೇಳೆ ಕಾರ್ಯಾಚರಿಸಲು ಬಳಕೆಯಾಗುತ್ತಿದೆ. ಆದರೂ ಕೊಳೆಗೇರಿ ನಿವಾಸಿಗಳು ಈ ಹಳಿಗಳನ್ನು ತಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ರೈಲ್ವೆ ಇಲಾಖೆ ನಿರಂತರವಾಗಿ ಪರಿಶೀಲಿಸುತ್ತಿದ್ದು, ಈ ಬಗ್ಗೆ ಗಮನ ಹರಿಸುತ್ತೆ ಎಂದು ತಿಳಿಸಿದ್ದಾರೆ.