ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಮಂಗಳೂರು ಚೆಲ್ವೆ ಹಾಗೂ ಬಾಲಿವುಡ್ನ ಪ್ರಸಿದ್ಧ ನಟಿ ಐಶ್ವರ್ಯಾ ರೈ ಹಾಗೂ ಅವರ ಪತಿ ಅಭಿಷೇಕ್ ಬಚ್ಚನ್ ನಡುವೆ ಏನೋ ಭಿನ್ನಾಭಿಪ್ರಾಯವಿದೆ.ಅವರಿಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದಾರೆ ಮಾತ್ರವಲ್ಲ ಡಿವೋರ್ಸ್ ಕೂಡ ಆಗುತ್ತಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು.ಈ ವಿಚಾರ ಇಡೀ ದೇಶದಾದ್ಯಂತ ಸಂಚಲನ ಕ್ರಿಯೇಟ್ ಮಾಡಿತ್ತು.ಇದೀಗ ಇಂದು ಅಭಿಷೇಕ್ ಬಚ್ಚನ್ ಅವರ ಹುಟ್ಟುಹಬ್ಬಕ್ಕೆ ಪತ್ನಿ ಐಶ್ವರ್ಯಾ ರೈ ಅವರು ವಿಶ್ ಮಾಡಿದ್ದು, ಈ ರೂಮರ್ಸ್ಗೆಲ್ಲಾ ಇದೀಗ ಬ್ರೇಕ್ ಬಿದ್ದಿದೆ.
ನಟಿ ಐಶ್ವರ್ಯ ರೈ ಬರ್ತ್ಡೇ ದಿನ ಹ್ಯಾಪಿ ಬರ್ತ್ಡೇ ಎಂದಷ್ಟೆ ಎಂದಷ್ಟೇ ಬರೆದಿದ್ದ ಅಭಿಷೇಕ್ ಪೋಸ್ಟ್ ಅನ್ನು ಅನೇಕ ನೆಟ್ಟಿಗರು ಈ ಹಿಂದೆ ಪ್ರಶ್ನೆ ಮಾಡಿದ್ರು.ಈ ಮೂಲಕವೇ ಡಿವೋರ್ಸ್ ವಿಚಾರ ಭಾರಿ ವೈರಲ್ ಆಗಿತ್ತು.ಇದೀಗ ಅಭಿಷೇಕ್ ಬಚ್ಚನ್ ಹುಟ್ಟುಹಬ್ಬದ ದಿನವಾದ ಇಂದು ನಟಿ ಐಶ್ವರ್ಯಾ ರೈ ಲವ್ಲಿ ವಿಶ್ ಮಾಡಿದ್ದಾರೆ. ಫ್ಯಾಮಿಲಿ ಫೋಟೋವನ್ನು ಶೇರ್ ಮಾಡೋದ್ರ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.ಇದರಿಂದ ಐಶ್ವರ್ಯ ರೈ ಅವರ ಈ ಹೃದಯ ವೈಶಾಲ್ಯತೆಗೆ ಅವರ ಅಭಿಮಾನಿಗಳು ಕೂಡ ದಿಲ್ ಖುಷ್ ಆಗಿದೆ.
‘ಜನ್ಮದಿನದ ಶುಭಾಶಯಗಳು ಹೆಚ್ಚು ಸಂತೋಷ, ಪ್ರೀತಿ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ದೇವರು ನೀಡಲಿ ಎಂದು ಬರೆದಿದ್ದಾರೆ.ಫ್ಯಾಮಿಲಿ ಫೋಟೋ ಜೊತೆ ಅಭಿಷೇಕ್ ಬಚ್ಚನ್ ಬಾಲ್ಯದ ಫೋಟೋವನ್ನು ಕೂಡ ಐಶ್ವರ್ಯಾ ಶೇರ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಈ ಬಾಲ್ಯದ ಫೋಟೋದಲ್ಲಿ ಸುಂದರ ಮುಗುಳ್ನಗು ಬೀರಿದ್ದು,ವಿಶೇಷವಾಗಿದೆ.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಇಬ್ಬರೂ ಮದುವೆಯಾಗಿ 16 ವರ್ಷಗಳಾಗಿದ್ದು, ಏಪ್ರಿಲ್ 2007 ರಂದು ವಿವಾಹವಾಗಿದ್ದರು. ಸಲ್ಮಾನ್ ಜೊತೆಗಿನ ಬ್ರೇಕಪ್ ನಂತರ ಐಶ್ವರ್ಯಾ ಅಭಿಷೇಕ್ ಅವರನ್ನು ಮದುವೆಯಾದರು.ಐಶ್ವರ್ಯಾ ಮತ್ತು ಅಭಿಷೇಕ್ ಅರೇಂಜ್ಡ್ ಮ್ಯಾರೇಜ್ ಆದ್ರಾ ಅಥವಾ ಲವ್ ಮ್ಯಾರೇಜ್ ಆದ್ರಾ ಎನ್ನುವ ಪ್ರಶ್ನೆ ಅನೇಕರಲ್ಲಿತ್ತು. ನಟ ಅಭಿಷೇಕ್ ಬಚ್ಚನ್ ಜನವರಿ 2007 ರಂದು ನ್ಯೂಯಾರ್ಕ್ನ ಹೋಟೆಲ್ನ ಬಾಲ್ಕನಿಯಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ರಂತೆ.ನಾನು ಅಮಿತಾಬ್ ಬಚ್ಚನ್ ಅವರ ಮಗ ಅಥವಾ ನಾನು ಸ್ಟಾರ್ ಎಂಬ ಕಾರಣಕ್ಕಾಗಿ ಐಶ್ವರ್ಯಾ ನನ್ನನ್ನು ಮದುವೆಯಾಗಲಿಲ್ಲ. ಅಲ್ಲದೇ ಆಕೆ ಜಗತ್ತಿನ ಅತ್ಯಂತ ಬ್ಯೂಟಿಫುಲ್ ಗರ್ಲ್ ಎಂಬ ಕಾರಣಕ್ಕೆ ಅಥವಾ ಬಿಗ್ ಹೀರೋಯಿನ್ ಎಂಬ ಕಾರಣಕ್ಕೆ ನಾನು ಆಕೆಯನ್ನು ಮದುವೆಯಾಗಿಲ್ಲ. ನಾವು ಪರಸ್ಪರ ಪ್ರೀತಿಸುತ್ತಿದ್ದೆವು ಈ ಕಾರಣಕ್ಕೆ ಮದುವೆ ಆದೆವು ಎಂದು ಅಭಿಷೇಕ್ ಹೇಳಿದ್ದರು.ಐಶ್ವರ್ಯಾ ಹಾಗೂ ಅಭಿಷೇಕ್ ದಂಪತಿಗೆ ಆರಾಧ್ಯ ರೈ ಬಚ್ಚನ್ ಎಂಬ ಮುದ್ದು ಮಗಳಿದ್ದು, ಸದ್ಯ ಆರಾಧ್ಯಗೆ 12 ವರ್ಷ. 2011 ನವೆಂಬರ್ 16ಕ್ಕೆ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆರಾಧ್ಯ ಬಚ್ಚನ್ ಕೂಡ ಬಾಲಿವುಡ್ನಲ್ಲಿ ಮೋಸ್ಟ್ ಫೇವರಿಟ್ ಸ್ಟಾರ್ ಕಿಡ್ ಎಂದು ಗುರುತಿಸಿಕೊಂಡಿದ್ದಾರೆ.