ಕರಾವಳಿಶಿಕ್ಷಣಸುಳ್ಯ

ಸುಳ್ಯ: ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ಸಂವಿಧಾನ ಜಾಗೃತಿ, ಬೈಕ್ ರ‍್ಯಾಲಿ ಮೂಲಕ ವಿಭಿನ್ನ ಆಚರಣೆ

ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಫೆಬ್ರವರಿ ೪ರಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಬೈಕ್ ರ‍್ಯಾಲಿ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು. ಕಾಲೇಜಿನ NSS , ರೆಡ್ ಕ್ರಾಸ್ ಮತ್ತು ಚುನಾವಣಾ ಸಾಕ್ಷರತಾ ಸಂಘದವರು ಈ ರ್ಯಾಲಿಯಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲಡಾ. ರುದ್ರಕುಮಾರ್ ಎಂ.ಎಂ ಸಂವಿಧಾನದ ಬಗ್ಗೆ ಜಾಗೃತಿ ಜಾಥಾ ಬಗ್ಗೆ ಮಾತನಾಡಿದರು, ಬಳಿಕ ಜಾಥಾಕ್ಕೆ ಚಾಲನೆ ನೀಡಿದರು. KVG ವೃತ್ತದಿಂದ ಜಾಥಾ ಆರಂಭಗೊಂಡಿತು. ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕಿ ಡಾ. ಮಮತಾ ಕೆ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, NSS ಘಟಕಾಧಿಕಾರಿ ಸಂಜೀವ ಕುದ್ಪಾಜೆ, ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥ ಕುಲದೀಪ್ ಪಿ.ಪಿ ಮತ್ತು ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ಘಟಕಗಳ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಉಡುಪಿ ಜಿಲ್ಲಾ ಕಾಂಗ್ರೆಸ್ ಹೆಸರಲ್ಲಿ ಫೇಕ್ ಪೋಸ್ಟ್‌..! ಪ್ರಿಯಾಂಕ ಖರ್ಗೆ ನಡೆಯಿಂದ ನಮಗೆ ಮುಜುಗರವಾಗುತ್ತಿದೆ ಅನ್ನೋ ನಕಲಿ ವೈರಲ್ ಪೋಸ್ಟ್ ಗೆ ಜಿಲ್ಲಾ ಕಾಂಗ್ರೆಸ್ ಕಿಡಿ

ಸುಳ್ಯ: ಹಿಟಾಚಿ ತುಂಬಿಕೊಂಡು ಬಂದಿದ್ದ ಟಿಪ್ಪರ್ ಮಹಿಳೆಯ ಕಾರಿಗೆ ಗುದ್ದಿ ಎಸ್ಕೇಪ್..! ಇಡೀ ದಿನ ಹುಡುಕಾಡಿದಾಗ ಲಾರಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಪತ್ತೆ

ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ: ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮಕ್ಕೆ ಸಿದ್ಧತೆ