ನ್ಯೂಸ್ ನಾಟೌಟ್: ಸಿಗರೇಟು ಸೇದುತ್ತಿರುವ ಸೀತಾ ದೇವಿ, ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವ ಲಕ್ಷ್ಮಣ ಒಳಗೊಂಡ ರಾಮಾಯವನ್ನೇ ಅಣಕಿಸುವ, ಹಿಂದೂ ದೇವರನ್ನು ಅವಹೇಳನ ಮಾಡುವ ನಾಟಕ ಪ್ರದರ್ಶನ ಪುಣೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಫೆ.03ಕ್ಕೆ ಪ್ರದರ್ಶಿಸಿ ಭಾರಿ ವಿವಾದ ಸೃಷ್ಠಿಸಿದೆ.
ಪುಣೆ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯದ ಕಲಾ ಕೇಂದ್ರದಲ್ಲಿ ಈ ನಾಟಕ ಆಯೋಜನೆ ಮಾಡಲಾಗಿತ್ತು. ಪ್ರೊಫೆಸರ್ ನಿರ್ದೇಶಿತ ಈ ನಾಟಕವನ್ನು ಐವರು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದರು. ಈ ನಾಟಕದಲ್ಲಿ ಸೀತಾ ದೇವಿ ಸಿಗರೇಟು ಸೇದುತ್ತಿರುವ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವ ಹಾಗೂ ಲಕ್ಷ್ಮಣ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ನಾಟಕ ಪ್ರದರ್ಶಿಸಿದ್ದಾರೆ.
ರಾಮಾಯಣ, ಹಿಂದೂ ದೇವರನ್ನು ಅವಮಾನಿಸುವ ಈ ನಾಟಕ ಪ್ರದರ್ಶನಗೊಳ್ಳುತ್ತಿದ್ದಂತೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ, ಆರ್ಆರ್ಎಸ್ ಮೂಲದ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇರವಾಗಿ ವೇದಿಕೆಯತ್ತ ಆಗಮಿಸಿ ನಾಟಕ ನಿಲ್ಲಿಸಲು ಸೂಚಿಸಿದ್ದಾರೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡು ಗುಂಪುಗಳ ನಡುವೆ ತಳ್ಳಾಟ-ನೂಕಾಟ ನಡೆದಿತ್ತು. ಕೊನೆಗೂ ನಾಟಕ ನಿಲ್ಲಿಸುವಲ್ಲಿ ಎಬಿವಿಪಿ ವಿದ್ಯಾರ್ಥಿ ಘಟಕ ಯಶಸ್ವಿಯಾಗಿತ್ತು.
ವಿವಾದ, ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮಧ್ಯಪ್ರವೇಶ ಮಾಡಿದ್ದು, ಇದೀಗ ನಾಟಕ ಪ್ರದರ್ಶಿಸಿದ ಐವರು ವಿದ್ಯಾರ್ಥಿಗಳು, ಪ್ರೊಫೆಸರನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂ ಧಾರ್ಮಿಕ ಭಾವನಗೆ ಧಕ್ಕೆ ತಂದ ಈ ನಾಟಕದ ವಿರುದ್ದ ಎಬಿವಿಪಿ ದೂರು ದಾಖಲಿಸಿತ್ತು. ಪುಣೆ ವಿಶ್ವಿವಿದ್ಯಾಲಕ ಕಲಾ ಕೇಂದ್ರದ ಮುಖ್ಯಸ್ಥ ಪ್ರೊಫೆಸರ್ ಡಾ.ಪ್ರವೀಣ್ ಭೋಲೆ, ವಿದ್ಯಾರ್ಥಿಗಳಾದ ಭವೀಷ್ ಪಾಟಿಲ್, ಜಯ ಪಡ್ನೇಕರ್, ಪ್ರಥಮೇಶ್ ಸಾವಂತ್, ಖಷಿಕೇಶ್ ದಾಲ್ವಿ ಹಾಗೂ ಯಶ್ ಚಿಖ್ಲೆ ಅರೆಸ್ಟ್ ಆಗಿದ್ದಾರೆ.