ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಲಿರುವ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಲಿರುವ ಬಜೆಟ್ ಜತೆಗೆ ರೈಲ್ವೆ ಬಜೆಟ್ ಕೂಡ ಮಂಡನೆಯಾಗಲಿರುವುದು ಪ್ರಮುಖ ಆಕರ್ಷಣೆಯಾಗಿದೆ. ಕರೋನಾ ಹೊಡೆತಕ್ಕೆ ಸಿಲುಕಿರುವ ದೇಶಕ್ಕೆ ಕೇಂದ್ರದ ಬಜೆಟ್ ಎಷ್ಟರ ಮಟ್ಟಿಗೆ ಚೇತರಿಕೆ ನೀಡಲಿದೆ ಅನ್ನುವುದು ಕುತೂಹಲವಾಗಿದೆ. ನಾಳಿನ ಬಜೆಟ್ ಕುರಿತ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ.
- ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
- ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭ.
- ಬಜೆಟ್ ಮಂಡನೆಯನ್ನು ಡಿಡಿ ನ್ಯೂಸ್, ಸಂಸದ್ ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ಬುಕ್, ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.
- 2022 ರ ನಿರೀಕ್ಷಿತ ಬಜೆಟ್ ಈ ಸಲವೂ ಪೇಪರ್ ಲೆಸ್ ಆಗಿರಲಿದೆ. 2021 ರಲ್ಲಿಯೂ ನಿರ್ಮಲಾ ಸೀತಾರಾಮನ್ ಅವರು ಪೇಪರ್ ಲೆಸ್ ಬಜೆಟ್ ಮಂಡಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.
- ಪೇಪರ್ಲೆಸ್ ಬಜೆಟ್ ನಿಂದ ಸಾವಿರಾರು ಪುಟಗಳ ಕಾಗದ ನಷ್ಟವಾಗುವುದು ತಪ್ಪುತ್ತದೆ. ಇದೊಂದು ಪರಿಸರ ಪೂರಕ ಮಾದರಿ ಕೆಲಸವಾಗಿರುವುದು ಶ್ಲಾಘನೀಯ.
- ಕೇಂದ್ರ ಸರಕಾರದ ಬಜೆಟ್ ಕಾಪಿಯನ್ನು ನಿಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ಗಳಲ್ಲಿ ನೀವು ಸುಲಭವಾಗಿ ಡೌನ್ ಲೋಡ್ ಮಾಡಬಹುದು. ಇದಕ್ಕಾಗಿ ಯೂನಿಯನ್ ಬಜೆಟ್ ಮೊಬೈಲ್ ಆಪ್ ಇದೆ. ಅದು ಎಲ್ಲ ಎಂಪಿಗಳು ಹಾಗೂ ಜನಸಾಮಾನ್ಯರಿಗೂ ಬಜೆಟ್ ಮಂಡನೆ ಸಮಯದಲ್ಲಿ ಸಿಗಲಿದೆ.
- ಮೊಬೈಲ್ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಜೆಟ್ ಪ್ರತಿ ಪಡೆಯಬಹುದು. ಅಂಡ್ರಾಯ್ಡ್ ಹಾಗೂ ಐಒಎಸ್ ಪ್ಲಾಟ್ಫಾರ್ಮಗಳಲ್ಲೂ ಸುಲಭವಾಗಿ ಪ್ರತಿ ಸಿಗಲಿದೆ.
2021-22 ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ 2 ನೇ ಅವಧಿಯ 4 ನೇ ಬಜೆಟ್ ಆಗಿದೆ. ಅಲ್ಲದೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ 4ನೇ ಬಜೆಟ್ ಆಗಿದೆ.