ಬೆಂಗಳೂರು: ಜನವರಿ 31 ರಿಂದ ರಾಜ್ಯದಾದ್ಯಂತ ಜಾರಿಯಲ್ಲಿರುವ ರಾತ್ರಿ ಕರ್ಪ್ಯೂವನ್ನು ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸ್ವತಃ ಈ ವಿಷಯವನ್ನು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
– ದೇವಾಲಯಗಳಲ್ಲಿ ಎಲ್ಲ ಧಾರ್ಮಿಕ ಸೇವೆಗಳಿಗೆ
– ಸಾರಿಗೆ ವಾಹನಗಳಲ್ಲಿ ಆಸನ ಶೇ 100 ಭರ್ತಿಗೆ
– ಬಾರ್, ಪಬ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಶೇ 100ರರಷ್ಟು ಭರ್ತಿಗೆ
– ಎಲ್ಲ ಕಚೇರಿಗಳಲ್ಲಿ ಶೇ 100 ಹಾಜರಾತಿಗೆ
– ಸಿನಿಮಾ, ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ 50ರಷ್ಟು ಭರ್ತಿಗಷ್ಟೇ ಅನುಮತಿ
– ಮದುವೆಗಳಿಗೆ ಇನ್ನು ಮುಂದೆ ಹೊರಾಂಗಣದಲ್ಲಿ ಗರಿಷ್ಠ 300, ಒಳಾಂಗಣದಲ್ಲಿ ಗರಿಷ್ಠ 200 ಮಂದಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ.
– ಧಾರ್ಮಿಕ ಸ್ಥಳಗಳಲ್ಲಿ ಅರ್ಚನೆ, ಮಂಗಳಾರತಿಯಂತಹ ಸೇವೆಗಳಿಗೆ ಏಕಕಾಲಕ್ಕೆ ಗರಿಷ್ಠ 50 ಮಂದಿಗಷ್ಟೇ ಅವಕಾಶ
– ಎಲ್ಲ ಜಾತ್ರೆಗಳು, ರ್ಯಾಲಿ, ಧರಣಿ, ಪ್ರತಿಭಟನೆ, ಸಾಮಾಜಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳಿಗೆ ನಿರ್ಬಂಧ ಮುಂದುವರಿಕೆ
– ಈಜುಕೊಳ, ಜಿಮ್ ಗಳಲ್ಲಿ ಶೇ 50 ಅನುಮತಿ
– ಕ್ರೀಡಾ ಕಾಂಪ್ಲೆಕ್ಸ್ , ಕ್ರೀಡಾಂಗಣಗಳಲ್ಲಿ ಶೇ 50 ಅವಕಾಶ
– ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ ಟಿಪಿಸಿಆರ್ ತಪಾಸಣೆ ವರದಿ ಕಡ್ಡಾಯ
ಬೆಂಗಳೂರಿನಲ್ಲಿ ಶಾಲೆಗಲ್ಲಿ ಎಲ್ಲ ತರಗತಿಗಳು ಸೋಮವಾರದಿಂದ ಆರಂಭ. ಕೋವಿಡ್ ಪತ್ತೆಯಾದರೆ ಅಂಥ ತರಗತಿಯನ್ನು ಮಾತ್ರ ಮುಚ್ಚಲಾಗುವುದು. ಇಡೀ ಶಾಲೆಯಲ್ಲಿ ಎಷ್ಟು ಮಂದಿಗೆ ಕೋವಿಡ್ ದೃಢಪಟ್ಟಿದೆ ಎನ್ನುವುದನ್ನು ಆಧರಿಸಿ ಅಂಥ ಶಾಲೆಯನ್ನು ಎಷ್ಟು ದಿನ ಮುಚ್ಚಬೇಕು ಎಂದು ಆಯಾ ಜಿಲ್ಲಾಧಿಕಾರಿಗಳು ತೀರ್ಮಾನಿಸುತ್ತಾರೆ.