ನ್ಯೂಸ್ ನಾಟೌಟ್: ಜೀವನದಲ್ಲಿ ಸಂಶಯ ಎಂಬ ಮನೋರೋಗ ಒಮ್ಮೆ ಹೊಕ್ಕರೆ ಇಡೀ ಜೀವನವನ್ನೇ ಹಾಳು ಮಾಡುತ್ತದೆ ಎಂಬುದಕ್ಕೆ ಇಲ್ಲೊಂದು ನೈಜ ಉದಾಹರಣೆ ಇದೆ.
12 ವರ್ಷಗಳಿಂದ ಗೃಹಬಂಧನದಲ್ಲಿದ್ದ ಮಹಿಳೆಯನ್ನು ರಕ್ಷಣೆ ಮಾಡದ ರೋಚಕ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ (HD Kote, Mysuru) ತಾಲೂಕಿನ ಹೆಚ್.ಮಟಕೆರೆ ಗ್ರಾಮದಲ್ಲಿ ಈ ಅಮಾನವೀಯ ಘಟನೆ ವರದಿಯಾಗಿದೆ.
ಸಣ್ಣಾಲಯ್ಯ ಎಂಬಾತ ಪತ್ನಿಯನ್ನು ಗೃಹಬಂಧನದಲ್ಲಿ ಇರಿಸಿದ್ದನು ಎನ್ನಲಾಗಿದೆ. ಸಣ್ಣಾಲಯ್ಯ ಬಂಧನದಲ್ಲಿದ್ದ ಪತ್ನಿ ಸುಮಾ ಎಂಬಾಕೆಯನ್ನು ರಕ್ಷಿಸಿ, ಮಹಿಳೆಯ ಇಚ್ಛೆ ಮೇರೆಗೆ ಆಕೆಯ ಪೋಷಕರ ಮನೆಗೆ ಕಳುಹಿಸಲಾಗಿದೆ. ಸಣ್ಣಾಲಯ್ಯಗೆ ಸುಮಾ ಮೂರನೇ ಪತ್ನಿಯಾಗಿದ್ದು, 12 ವರ್ಷಗಳ ಹಿಂದೆ ಇಬ್ಬರ ಮದುವೆಯಾಗಿತ್ತು. ಸುಮಾ ಮೇಲೆ ಸಂಶಯ ಹೊಂದಿದ್ದ ಸಣ್ಣಾಲಯ್ಯ ಪತ್ನಿಯನ್ನು ಮನೆಯೊಳಗೆಯೇ ಬಂಧಿ ಮಾಡಿದ್ದನು. ಸಣ್ಣಾಲಯ್ಯ ಮೊದಲಿನ ಇಬ್ಬರ ಪತ್ನಿಯರು ಈತನ ಕಿರಿಕಿರಿಗೆ ಬೇಸತ್ತು ದೂರವಾಗಿದ್ದಾರೆಎನ್ನಲಾಗಿದೆ.
ನೆರೆಹೊರೆಯವರು ಜೊತೆಯಲ್ಲಿಯೂ ಮಾತನಾಡದಂತೆ ಕಿಟಕಿಗಳನ್ನು ಸಹ ಭದ್ರ ಮಾಡಿದ್ದನು. ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಬಕೆಟ್ನಲ್ಲಿಯೇ ಶೌಚ ಮಾಡಿಸಿ, ರಾತ್ರಿ ವೇಳೆ ಮಲ, ಮೂತ್ರವನ್ನು ಹೊರಗೆ ಹಾಕುತ್ತಿದ್ದನು ಎನ್ನಲಾಗಿದೆ.
ಈ ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ ಎಂಬವರು ಸಾಂತ್ವನ ಕೇಂದ್ರದ ಜಶೀಲ, ಎಎಸ್ಐ ಸುಭಾನ್ ಇತರರ ತಂಡ ಮನೆಗೆ ಭೇಟಿ ನೀಡಿ ಸುಮಾ ಎಂಬಾಕೆಯನ್ನು ರಕ್ಷಣೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮನೆಯ ಸುತ್ತ ಗ್ರಾಮಸ್ಥರು ಜಮಾಯಿಸಿದ್ದರು.
ಬುಧವಾರ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದ್ದು, ರಾತ್ರೋರಾತ್ರಿ ಸುಮಾ ಮತ್ತು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಯಾರಿಗಾದರೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದ ಎಂಬ ಆರೋಪ ಸಹ ಕೇಳಿ ಬಂದಿದೆ.