ನ್ಯೂಸ್ ನಾಟೌಟ್ : ಸಂಪಾಜೆ ಗ್ರಾಮದ ಗೂನಡ್ಕದಲ್ಲಿರುವ ಪೇರಡ್ಕ ವಲಿಯುಲ್ಲಾಹಿ ದರ್ಗಾಶರೀಫ್, ಪೇರಡ್ಕ- ಗೂನಡ್ಕ ಉರೂಸ್ ಸಮಾರಂಭವು ಭಾರಿ ವಿಜೃಂಭಣೆಯಿಂದ ನಡೆಯಲಿದೆ. ಇದೇ ಬರುವ ಫೆ.9 ರಿಂದ 11ರ ತನಕ ಮೂರು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಸರ್ವಧರ್ಮ ಸಮ್ಮೇಳನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರಾಗಮಿಸಲಿದ್ದಾರೆ ಎಂದು ಎಂ.ಜೆ.ಎಂ ಪೇರಡ್ಕ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಾ, ಪ್ರತಿ ವರ್ಷದಂತೆ ಈ ಬಾರಿಯೂ ಪೇರಡ್ಕ ದರ್ಗಾ ಶರೀಫ್ ಜಾತಿಮತ ಬೇಧವಿಲ್ಲದೆ ಸರ್ವರಿಂದಲೂ ಗೌರವಿಸಲ್ಪಡುವ ಆಶಾಕೇಂದ್ರವೂ ಹೌದು. ಈ ಹಿನ್ನಲೆಯಲ್ಲಿ 3 ದಿನಗಳ ಉರೂಸ್ ಸಮಾರಂಭ ವೈಭವದಿಂದ ನಡೆಯಲಿದೆ.
ಫೆ.10ರಂದು ರಾತ್ರಿ 8 ರಿಂದ ನಡೆಯುವ ಸಮಾರಂಭವನ್ನು ಅರಂತೋಡು ಬಿ.ಜೆ.ಎಂ ಖತೀಬರಾದ ಇಸಾಖ್ ಬಾಖವಿ ಉದ್ಘಾಟಿಸಲಿರುವರು.ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಭಾಷಣ ಮಾಡಲಿದ್ದಾರೆ .ಎಂ.ಜೆ.ಎಂ.ಪೇರಡ್ಕ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮೈಲಿಕಲ್ಲು ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇನ್ನು ಫೆ.11ರಂದು ಸಂಜೆ 7 ರಿಂದ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಅಝೀಝ್ ದಾರಿಮಿ ಚೊಕ್ಕಬೆಟ್ಟು ಮುಖ್ಯ ಭಾಷಣ ಮಾಡಲಿದ್ದಾರೆ. ರಾಜಕೀಯ, ಸಾಮಾಜಿಕ ಮುಖಂಡರು, ಎಲ್ಲಾ ಧರ್ಮಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಎಂ.ಜೆ.ಎಂ. ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು. ಎಂಆರ್ಡಿಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಸ್ವಾಗತಿಸಲಿದ್ದಾರೆ. ಸಯ್ಯದ್ ಝನುಲ್ ಆಬಿದೀನ್ ತಂಜಳ್ ದುಗ್ಗಲಡ್ಕ ದುಃವಾ ನೇತೃತ್ವ ವಹಿಸಲಿದ್ದಾರೆ. ರಿಯಾಝ್ ಪೈಝಿ ಎಮ್ಮೆಮಾಡು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಪ್ರಮುಖರಾದ ಇಸ್ಮಾಯಿಲ್ ನಾಪೊಕ್ಲು, ಡಾ.ಉಮ್ಮರ್ ಬೀಜದಕಟ್ಟೆ, ನ.ಪಂ.ಸದಸ್ಯ ಕೆ.ಎಸ್.ಉಮ್ಮರ್, ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಹನೀಫ, ಅಬ್ದುಲ್ ರಹಿಮಾನ್ ಸಂಕೇಶ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಎಂ.ಜೆ.ಎಂ. ಪೇರಡ್ಕ-ಗೂನಡ್ಕ ಪ್ರಧಾನ ಕಾರ್ಯದರ್ಶಿಪಿ.ಕೆ.ಉಮ್ಮರ್,ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ.ಹಮೀದ್ , ಉಪಾಧ್ಯಕ್ಷ ಹನೀಫ್.ಟಿ.ಬಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆ ಅಧ್ಯಕ್ಷ ಮುನೀರ್ ದಾರಿಮಿ ಉಪಸ್ಥಿತರಿದ್ದರು.